Friday, September 13, 2013

ಅನನ್ಯ

ಅನನ್ಯ
********

ದಾರಿಯಲ್ಲಿ ಹಲವರು ನಡೆಯುತ್ತಿದ್ದರು
ಅವನೊಬ್ಬ ವಿರಳ
ಅವನದು ಕುಂಟು ನಡಿಗೆ
______________

ಆ ರಸ್ತೆಯಲಿ
ಎಲ್ಲರೂ ಹಿಂಬಾಲಿಸುತ್ತಿದ್ದರು
ಒಬ್ಬರನೊಬ್ಬರನ್ನು
ಗಮ್ಯ ತಲುಪಲು,
ಅವನು ವಿಶಿಷ್ಟ ದಾರಿ ಹಿಡಿದ
ಗಮ್ಯ ತಲುಪಲು
_______________

ಚಹಾ ಕುಡಿದು
ಛೆ ಛೆ ಚಹಾದಲ್ಲಿ
ಸಕ್ಕರೆ ಇಲ್ಲ
ಎಂಥ ಹಾಳು ಚಹಾ ಎಂದನೊಬ್ಬ
ಅವನು ಬಂದು
ಅದೇ ಚಹಾ ರುಚಿಯಿಂದ ಕುಡಿದು
ಹೇಳಿದ
ತುಂಬಾ ಸಮಯದ ನಂತರ ಇಷ್ಟು
ಒಳ್ಳೆ ಚಹಾ ಕುಡಿದದ್ದು

_______________

ಕತ್ತೆ ಹೋಗುತ್ತಿತ್ತು
ಎಲ್ಲರೂ ನೋಡಲಾರಂಭಿಸಿದ್ದರು
ಅವನು
ಕತ್ತೆ ನೋಡುವವರನ್ನು ನೋಡುತ್ತಿದ್ದ

_______________

ದೊಡ್ಡ ಸಮಾರಂಭ
ಎಲ್ಲರೂ
ಸೂಟು ಬೂಟು ಧರಿಸಿ ಬಂದಿದ್ದರು
ಅವನು
ಪಂಚೆ ಶಾಲು ಉಡುಕೊಂಡು ಬಂದಿದ್ದ
ತುಂಬಾ ಜನ ಅವನನ್ನೇ ನೋಡುತ್ತಿದ್ದರು

by ಹರೀಶ್ ಶೆಟ್ಟಿ, ಶಿರ್ವ

2 comments:

  1. ಒಬ್ಬರಿಗೆ ಒಪ್ಪವಾದದ್ದು - ಇನ್ನೊಬ್ಬರಿಗೆ ಅಸಹ್ಯವಾಗಬಹುದು. ಲೋಕಾ ವಿಭಿನ್ನ ರುಚಿಹಿ ಅಲ್ಲವೇ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...