Wednesday, September 4, 2013

ಇದೆಲ್ಲಿಯ ನ್ಯಾಯ ?

ಗೆಳತಿ... 
ಮೈತ್ರಿ ತೊರೆದು 
ನನ್ನನ್ನು ಹಿಂಬಾಲಿಸು 
ಎಂದು ಹೇಳಿದರೆ 
ನಾನ್ಯಾಕೆ ಹಿಂಬಾಲಿಸಲಿ ಹೇಳು 
ನಿನಗಿಲ್ಲದ ಅಗತ್ಯ 
ನನಗ್ಯಾಕೆ ಹೇಳು 
by ಹರೀಶ್ ಶೆಟ್ಟಿ,ಶಿರ್ವ

*******

ಗೆಳತಿ...
ನನ್ನದೆಲ್ಲವನ್ನೂ ಇಷ್ಟಪಡು 
ಆದರೆ ಟೀಕಿಸ ಬೇಡ 
ಇದೆಲ್ಲಿಯ ನ್ಯಾಯ ಹೇಳು 
ನನ್ನದೆಲ್ಲವನ್ನೂ ಟೀಕಿಸಲು 
ಸ್ವಾತಂತ್ರ್ಯ ಇದ್ದ ನಿನಗೆ 
ನಿನ್ನದನ್ನು ಟೀಕಿಸಲು 
ಸ್ವಾತಂತ್ರ್ಯ 
ನನಗ್ಯಾಕೆ ಇಲ್ಲ ಹೇಳು 
by ಹರೀಶ್ ಶೆಟ್ಟಿ, ಶಿರ್ವ

1 comment:

  1. ಎರಡೂ ಹನಿಗಳಲೂ ನನಗೆ ನ್ಯಾಯವೇ ಕಂಡಿತು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...