Wednesday, September 11, 2013

ಏಕಾಂತ ಏಕಾಂತ

ಏಕಾಂತ ಏಕಾಂತ
ಹೃದಯ ಪಥದಲಿ
ಹೀಗೆ ಉರುಳಿ ನಾನು ಬಿದ್ದೆ
ಮುರಿಯಿತು ಕನಸೆಲ್ಲ
ನಿರಾಶೆ ತುಂಬಿದೆ
ಎಲ್ಲ ಆನಂದ ಸುಪ್ತವಾಗಿದೆ
ಜೀವನ ಮರೆಯಾಗಿದೆ
ನಿನ್ನನ್ನು ಪ್ರೀತಿಸಿದ ಕಾರಣ
ಈ ಸಜೆ ನನಗೆ ಸಿಕ್ಕಿದೆ
ಏಕಾಂತ ಏಕಾಂತ
ಮೈಲುಗಟ್ಟಲೆ ಹರಡಿದೆ ಕೇವಲ ಏಕಾಂತ

ಕನಸಲಿ ಕಂಡಿದೆ
ಒಂದು ಸೆರಗನ್ನು ಕೈಯಲ್ಲಿ ನನ್ನ
ಈಗ ಮುರಿದ ಕನಸಿನ ಗಾಜು
ಚುಚ್ಚುತ್ತಿದೆ ಈ ಕಣ್ಣಿಗೆ ನನ್ನ
ನಿನ್ನೆ ಯಾರೋ ಇಲ್ಲಿದ್ದರು
ಈಗ ಯಾರಿಲ್ಲ
ಉಸಿರಲಿ ಅಲ್ಲಾಡುತ್ತಿದೆ
ಏನೋ ಸರ್ಪದಂತೆ
ಏಕಾಂತ ಏಕಾಂತ ಕಣ್ಣಲ್ಲಿ ಎಷ್ಟು ಕಣ್ಣೇರು ತಂದಿದೆ ಏಕಾಂತ -೨
ಏಕಾಂತ, ಏಕಾಂತ .....

ಏಕೆ ಅಂತಹ ನಿರಿಕ್ಷೆಯನ್ನಿಟ್ಟೆ
ಅಂದರೆ ಹೀಗೆ ವಿಫಲವಾಯಿತು
ನನ್ನ ಗಮ್ಯ ದೂರದಲ್ಲಿತ್ತು
ಆದರೆ ಹಾದಿಯಲ್ಲಿಯೇ ಸಂಜೆಯಾಯಿತು
ಈಗ ಎಲ್ಲಿಗೆ ಹೋಗಲಿ ನಾನು
ಯಾರಿಗೆ ತಿಳಿಸಲಿ ನಾನು
ನಾನು ಬಯಸಿದ್ದೇನು
ಏನು ಭಾಗ್ಯದಲಿ ಬಂತು
ಏಕಾಂತ, ಏಕಾಂತ
ಒಂದು ರೀತಿಯ ಕತ್ತಲ ಗುಂಡಿಯ ಹಾಗಿದೆ ಏಕಾಂತ
ಏಕಾಂತ, ಏಕಾಂತ ......

ಮೂಲ : ಜಾವೇದ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ ,ಶಿರ್ವ
ಹಾಡಿದವರು : ಸೋನು ನಿಗಮ್
ಸಂಗೀತ: ಶಂಕರ್ ಏಹಸಾನ್  ಲಾಯ್
ಚಿತ್ರ: ದಿಲ್ ಚಾಹತಾ ಹೈ

Tanhaai, tanhaai
Dil ke raaste mein kaisi thokar maine khaayi
Toote khwaab saare, ek maayusi hai chhaayi
Har khushi so gayi, zindagi kho gayi
Tumko jo pyaar kiya maine to sazaa main paayi
Tanhaai, tanhaai, milo hai phaili hui tanhaai - 2

(Khwaab mein dekha tha ek aanchal
Maine apne haathon mein
Ab toote sapnon ke shishe
Chubte hai in aankhon mein) - 2
Kal koi tha yahin, ab koi bhi nahin
Banke naagin jaise hai saanson mein laheraayi
Tanhaai, tanhaai, palkon pe kitne aansu hai laayi - 2

(Kyoon aisi umeed ki maine
Jo aise naakaam hui
Door banaayi thi manzil
To raste mein hi shaam hui) - 2
Ab kahan jaaoon main, kisko samjhaaoon main
Kya maine chaaha tha aur kyoon kismat mein aayi
Tanhaai, tanhaai, jaise andhero ki ho gehraayi
Dil ke raaste mein kaisi thokar maine khaayi
Toote khwaab saare, ek maayusi hai chhaayi
Har khushi so gayi, zindagi kho gayi
Tumko jo pyaar kiya maine to sazaa main paayi
Tanhaai, tanhaai, milo hai phaili hui tanhaai - 2
Tanhaai, tanhaai, tanhaai, tanhaai
 www.youtube.com/watch?v=-G28-nYPYj0

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...