Tuesday, September 17, 2013

ಇನ್ನು ದೂರ ಇರುವೆ ನಿನ್ನಿಂದ

ಗೆಳತಿ

ಇನ್ನು ದೂರ ಇರುವೆ ನಿನ್ನಿಂದ 
ಹಲವು ಪ್ರೇಮ ಸಂದೇಶ ಕಳಿಸಿದ ನಿನಗೆ 
ನಿನ್ನಿಂದ ಒಂದೂ ಉತ್ತರವಿಲ್ಲದ ಮೇಲೆ 
ಇನ್ನು ನಿನ್ನ ಹೃದಯ ಮಿಡಿಯುವುದೆಂದು 
ಸುಮ್ಮನೆ ಅಪೇಕ್ಷಿಸುವುದಕ್ಕೆ ಏನು ಅರ್ಥವಿಲ್ಲ 

ನಾನು ನಿನ್ನ ಮನೆಯ ಸುತ್ತ ಮುತ್ತ ಅಲೆದು 
ದಿನ ನಿನ್ನ ಗೋಡೆಯಲಿ ನನ್ನ ಹೆಸರು ಬರೆಯುವೆ 
ಆದರೆ ನೀನು ನನ್ನ ಮನೆಯಲಿ ಇಣುಕಿಯೂ ನೋಡದ ಮೇಲೆ
ಇನ್ನು ನೀನು ಬರುವುದನ್ನು
ಸುಮ್ಮನೆ ಕಾಯುವುದಕ್ಕೆ ಏನು ಅರ್ಥವಿಲ್ಲ

ನೀನು ನನ್ನ ಮನ ಮಂಧಿರದಲ್ಲಿರುವೆ
ಆದರೆ ನಿನ್ನ ಹೃದಯದಲ್ಲಿ ನಾನಿಲ್ಲ
ಇನ್ನು ಎಂದೋ ಎಲ್ಲಿಯೋ ದಾರಿಯಲಿ ಸಿಕ್ಕಿದರೆ
ನೀನು ಅತ್ತ ಸಾಗು ನಾನು ಇತ್ತ ಸಾಗುವೆ
ನಾವು ಒಂದಾಗದ ಈ ಸ್ಥಿತಿಯಲ್ಲಿ
ಸುಮ್ಮನೆ ಕೊರಗುವುದಕ್ಕೆ ಏನು ಅರ್ಥವಿಲ್ಲ

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...