ಮಾಲಿ
-------
ಉದ್ಯಾನದಲ್ಲಿ ಅರಳಿದ
ಸಾವಿರಾರು ಹೂವಿನ
ಕಣ್ಣಲ್ಲಿ ಉಪಕಾರದ ಭಾವ,
ಪ್ರೀತಿ ವಾತ್ಸಲ್ಯದಿಂದ
ಅವುಗಳನ್ನು ಕಾಪಾಡುತ್ತಿದ್ದ
ಮಾಲಿಯನ್ನು ಕಂಡು
------------
ಸಾಕಿದ ಗಿಡ
ಹೂವು ಬಿಡುವಾಗ
ಗಿಡಕ್ಕಿಂತ ಹೆಚ್ಚು
ಮಾಲಿಗೆ
ಹೂವು ಅರಳುವ ನಿರೀಕ್ಷೆ
------------
ಮರದಲ್ಲಿ ಬೆಳೆದ
ಸುಂದರ ಮಾವಿನ ಹಣ್ಣು
ಕಂಡು ಮಾಲಿಗೆ ಸಂತೃಪ್ತಿ,
ಇತರರಿಗೆ ಅದರ ರುಚಿ
ನೋಡಬೇಕೆಂದು ಆಸೆ
------------
ಮರದ ಹಣ್ಣು ಕೊಯ್ದು
ತಿಂದ ಮಕ್ಕಳ
ಮುಖದಲ್ಲಿ ಹರ್ಷ,
ಬರಿದಾದ ಮರವನ್ನು ನೋಡಿ
ಮಾಲಿಯ ಕಣ್ಣಲಿ ಅಶ್ರು ವರ್ಷ
by ಹರೀಶ್ ಶೆಟ್ಟಿ,ಶಿರ್ವ
-------
ಉದ್ಯಾನದಲ್ಲಿ ಅರಳಿದ
ಸಾವಿರಾರು ಹೂವಿನ
ಕಣ್ಣಲ್ಲಿ ಉಪಕಾರದ ಭಾವ,
ಪ್ರೀತಿ ವಾತ್ಸಲ್ಯದಿಂದ
ಅವುಗಳನ್ನು ಕಾಪಾಡುತ್ತಿದ್ದ
ಮಾಲಿಯನ್ನು ಕಂಡು
------------
ಸಾಕಿದ ಗಿಡ
ಹೂವು ಬಿಡುವಾಗ
ಗಿಡಕ್ಕಿಂತ ಹೆಚ್ಚು
ಮಾಲಿಗೆ
ಹೂವು ಅರಳುವ ನಿರೀಕ್ಷೆ
------------
ಮರದಲ್ಲಿ ಬೆಳೆದ
ಸುಂದರ ಮಾವಿನ ಹಣ್ಣು
ಕಂಡು ಮಾಲಿಗೆ ಸಂತೃಪ್ತಿ,
ಇತರರಿಗೆ ಅದರ ರುಚಿ
ನೋಡಬೇಕೆಂದು ಆಸೆ
------------
ಮರದ ಹಣ್ಣು ಕೊಯ್ದು
ತಿಂದ ಮಕ್ಕಳ
ಮುಖದಲ್ಲಿ ಹರ್ಷ,
ಬರಿದಾದ ಮರವನ್ನು ನೋಡಿ
ಮಾಲಿಯ ಕಣ್ಣಲಿ ಅಶ್ರು ವರ್ಷ
by ಹರೀಶ್ ಶೆಟ್ಟಿ,ಶಿರ್ವ
No comments:
Post a Comment