ಗೆಳತಿ...
ನನ್ನ
ಪ್ರೇಮ ಕವಿತೆಯಲಿ
ನೀನು ವ್ಯಾಕರಣ ಹುಡುಕಿದರೆ
ಹೇಗೆ ಹೇಳು
ಈ ಹೃದಯಕ್ಕೆ
ವ್ಯಾಕರಣ ತಿಳಿಯದು
ಇದರಿಂದ ಹೊರಟ
ಮಾತಲ್ಲಿ ಇರುವುದು
ಕೇವಲ ಪ್ರೀತಿ ರಸ
ಇಲ್ಲಿ ನಿನಗೆ ವ್ಯಾಕರಣ ಸಿಗದು
by ಹರೀಶ್ ಶೆಟ್ಟಿ,ಶಿರ್ವ
*******************
ಗೆಳತಿ...
ಈ ಸಾಗರದ ಅಲೆಗಳು
ನಿಷ್ಠುರ
ಮೊದಲು
ನಮ್ಮ ಮರಳ ಮನೆ
ಕೊಚ್ಚಿ ಕೊಂಡೊಯ್ಯುತ್ತಿತ್ತು
ಈಗ ನಾನು
ಮರಳ ಮೇಲೆ ಬರೆದ
ನಿನ್ನ ಹೆಸರನ್ನು
ಅಳಿಸುತ್ತಿದೆ
by ಹರೀಶ್ ಶೆಟ್ಟಿ,ಶಿರ್ವ
******************
ಗೆಳತಿ...
ಮರದಿಂದ ಬಿದ್ದ
ಒಣಗಿದ ಎಲೆಗಳಿಗೂ
ನನ್ನ ಮೇಲೆ ಅನುಕಂಪ
ಗಾಳಿಯ ರಭಸವನ್ನು
ಸಹಿಸುತ
ಬಂದು ಬಂದು
ನನ್ನನ್ನು ಅಪ್ಪಿಕೊಳ್ಳುತ್ತಿವೆ
by ಹರೀಶ್ ಶೆಟ್ಟಿ,ಶಿರ್ವ
*****************
ಗೆಳತಿ...
ನನ್ನಲ್ಲಿ
ನಿನ್ನಲ್ಲಿ
ಎಲ್ಲಿಯ ಹೋಲಿಕೆ ಹೇಳು
ನೀನು ಮಧುರ ಹಾಡು
ಹಾಡುವ ಕೋಗಿಲೆ
ನಾನು ಕೆಲಸ ಇಲ್ಲದೆ
ಕಾವ್ ಕಾವ್ ಎನ್ನುವ ಕಾಗೆ
by ಹರೀಶ್ ಶೆಟ್ಟಿ, ಶಿರ್ವ
ನನ್ನ
ಪ್ರೇಮ ಕವಿತೆಯಲಿ
ನೀನು ವ್ಯಾಕರಣ ಹುಡುಕಿದರೆ
ಹೇಗೆ ಹೇಳು
ಈ ಹೃದಯಕ್ಕೆ
ವ್ಯಾಕರಣ ತಿಳಿಯದು
ಇದರಿಂದ ಹೊರಟ
ಮಾತಲ್ಲಿ ಇರುವುದು
ಕೇವಲ ಪ್ರೀತಿ ರಸ
ಇಲ್ಲಿ ನಿನಗೆ ವ್ಯಾಕರಣ ಸಿಗದು
by ಹರೀಶ್ ಶೆಟ್ಟಿ,ಶಿರ್ವ
*******************
ಗೆಳತಿ...
ಈ ಸಾಗರದ ಅಲೆಗಳು
ನಿಷ್ಠುರ
ಮೊದಲು
ನಮ್ಮ ಮರಳ ಮನೆ
ಕೊಚ್ಚಿ ಕೊಂಡೊಯ್ಯುತ್ತಿತ್ತು
ಈಗ ನಾನು
ಮರಳ ಮೇಲೆ ಬರೆದ
ನಿನ್ನ ಹೆಸರನ್ನು
ಅಳಿಸುತ್ತಿದೆ
by ಹರೀಶ್ ಶೆಟ್ಟಿ,ಶಿರ್ವ
******************
ಗೆಳತಿ...
ಮರದಿಂದ ಬಿದ್ದ
ಒಣಗಿದ ಎಲೆಗಳಿಗೂ
ನನ್ನ ಮೇಲೆ ಅನುಕಂಪ
ಗಾಳಿಯ ರಭಸವನ್ನು
ಸಹಿಸುತ
ಬಂದು ಬಂದು
ನನ್ನನ್ನು ಅಪ್ಪಿಕೊಳ್ಳುತ್ತಿವೆ
by ಹರೀಶ್ ಶೆಟ್ಟಿ,ಶಿರ್ವ
*****************
ಗೆಳತಿ...
ನನ್ನಲ್ಲಿ
ನಿನ್ನಲ್ಲಿ
ಎಲ್ಲಿಯ ಹೋಲಿಕೆ ಹೇಳು
ನೀನು ಮಧುರ ಹಾಡು
ಹಾಡುವ ಕೋಗಿಲೆ
ನಾನು ಕೆಲಸ ಇಲ್ಲದೆ
ಕಾವ್ ಕಾವ್ ಎನ್ನುವ ಕಾಗೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment