ಜೀವನ ಇಲ್ಲಿ
ಮರಣ ಇಲ್ಲಿ
ಇದರ ಹೊರತು ಹೋಗುವುದೆಲ್ಲಿ
ಮನಸ್ಸಾದಾಗ ನನ್ನನ್ನು ಕರೆ ನೀನು
ನಾನಲ್ಲಿಯೇ ಇದ್ದೇನೆ
ನಾನಿದ್ದಲ್ಲಿ
ಎರಡೂ ಜಗ ನಮ್ಮದಿಲ್ಲಿ
ಇದರ ಹೊರತು ಹೋಗುವುದೆಲ್ಲಿ
ಜೀವನ ಇಲ್ಲಿ
ಮರಣ ಇಲ್ಲಿ .....
ಈ ನನ್ನ ಗೀತೆಯನ್ನು
ಜೀವನ ಸಂಗೀತವನ್ನು
ನಾಳೆಯೂ ಯಾರೋ ಪುನರಾವರ್ತಿಸುವನು
ಜಗತ್ತನ್ನು ನಗಿಸಲು ವೇಷಧಾರಿ
ರೂಪ ಬದಲಾಯಿಸಿ ಬರುವನು
ಸ್ವರ್ಗ ಇಲ್ಲಿ
ನರಕ ಇಲ್ಲಿ
ಇದರ ಹೊರತು ಹೋಗುವುದೆಲ್ಲಿ
ಜೀವನ ಇಲ್ಲಿ
ಮರಣ ಇಲ್ಲಿ .....
ನಾಳೆ ಆಟದಲ್ಲಿ ನಾನಿರಲಿ
ಇಲ್ಲದಿರಲಿ
ಬಾನಲ್ಲಿ ತಾರೆ ಇರುವುದು ಸದಾ
ಮರೆಯುವೆ ನೀನು
ಮರೆಯುವರು ಅವರು
ಆದರೆ ನಾನು ನಿನ್ನಾಗಿಯೇ ಇರುವೆ ಸದಾ
ಉಳಿಯುವುದು ಕೇವಲ ನಾಮ್ಮ ಗುರುತು ಇಲ್ಲಿ
ಇದರ ಹೊರತು ಹೋಗುವುದೆಲ್ಲಿ
ಜೀವನ ಇಲ್ಲಿ, ಮರಣ ಇಲ್ಲಿ .....
ಮೂಲ :ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಮೇರ ನಾಮ್ ಜೋಕರ್
जीना यहाँ, मरना यहाँ
इसके सिवा जाना कहाँ
जी चाहे जब हमको आवाज़ दो
हम हैं वहीं, हम थे जहाँ
अपने यही दोनों जहां
इसके सिवा जाना कहाँ
ये मेरा गीत जीवन संगीत
कल भी कोई दोहरायेगा
जग को हँसाने बहरूपिया
रूप बदल फिर आयेगा
स्वर्ग यहीं, नर्क यहाँ
इसके सिवा जाना कहाँ
जी चाहे जब...
कल खेल में, हम हों न हों
गर्दिश में तारे रहेंगे सदा
भूलोगे तुम, भूलेंगे वो
पर हम तुम्हारे रहेंगे सदा
रहेंगे यहीं, अपने निशाँ
इसके सिवा जाना कहाँ
जी चाहे जब...
http://www.youtube.com/watch?v=5XOi1GzOgfc
No comments:
Post a Comment