Friday, September 6, 2013

ಸಂಧ್ಯಾಕಾಲ ಆದಂತೆ

ಸಂಧ್ಯಾಕಾಲ ಆದಂತೆ 
ನನ್ನ ಹೆಜ್ಜೆ ಆ ಸಾಗರದ ಕಡೆ ನಿತ್ಯದಂತೆ 
ಅದೇ ಏಕಾಂತತೆ 

ಏರು ತಗ್ಗುವ ಅಲೆಗಳಂತೆ 
ನಿನ್ನ ನೆನಪಿನ ಕಂತೆ 
ಅದೇ ಕಣ್ಣೀರ ಸಂತೆ 

ರವಿ ತಣ್ಣಗಾದಂತೆ 
ಹೃದಯ ಹಗುರವಾದಂತೆ 
ಅದೇ ಕ್ಷಣಿಕ ನೆಮ್ಮದಿಯಂತೆ

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...