Saturday, September 21, 2013

ರಾಜಕೀಯ

ರಾಜಕೀಯ
________
ಸಭೆ ಸೇರಿತು 
ಅವನನ್ನು ಕೇಳಲು
ಅವನು ಸಿಗರೇಟ್ ಸೇದುತ್ತಿದ್ದ 
ಅವನ ಸೆಕ್ರೆಟರಿ ಅವನಿಗಾಗಿ ಭಾಷಣ ಬರೆಯುತ್ತಿದ್ದ 

_____________

ಕೋಮು ಗಲಾಟೆ 
ಎಲ್ಲ ಕಡೆ ಮುಗ್ಧ ಜನರ ನೆತ್ತರು
ಅವನು ಎ.ಸಿ ರೂಮಲ್ಲಿ ಕೂತು
ಟಿ.ವಿಯಲ್ಲಿ ಈ ಸಮಾಚಾರ ನೋಡುತ
ಕೆಂಪು ಜ್ಯೂಸು ಕುಡಿಯುತ್ತಿದ್ದ.

_____________

ರಾಮ ರಹೀಮ ಇಬ್ಬರು ಮಿತ್ರರು
ಇಬ್ಬರೂ ರಾಜಕೀಯದಲ್ಲಿ ಸಕ್ರಿಯ
ಸಂಸತ್ತು ಭವನದಲ್ಲಿ ಇಬ್ಬರ ಮುಖದಲ್ಲೂ
ಶತ್ರುತ್ವದ ಮುಖವಾಡ

_____________

ಒಂದು ಪಾರ್ಟಿಯ ರಾಜಕಾರಣಿ
ಇನ್ನೊಂದು ಪಾರ್ಟಿಯ ಭ್ರಷ್ಟ ರಾಜಕಾರಣಿಯ
ಮೇಲೆ ಸಂಸತ್ತು ಭವನದಲ್ಲಿ
ಆರೋಪದ ಸುರಿಮಳೆ ಮಾಡಿದ
ಆ ಭ್ರಷ್ಟ ರಾಜಕಾರಣಿಯ ರಾತ್ರಿ
ಭೋಜನ ಕೂಟದಲಿ
ಆರೋಪಿಸಿದ ರಾಜಕಾರಣಿ
ಮುಖ್ಯ ಅತಿಥಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...