Sunday, September 1, 2013

ಇದಲ್ಲ ಪಡೆದಂತೆ

ಇದಲ್ಲ ಪಡೆದಂತೆ
ಇದಲ್ಲ ಕಳೆದಂತೆ
ನೀನಿಲ್ಲದಿದ್ದರೂ ಏನೋ
ಯಾಕೆ ನೀನಿದ್ದಂತೆ

ನಿನ್ನಿಂದಲೇ ದಿನ ಉಗಮ
ಮೋಹಕ ಸಂಜೆಯ ಆಗಮ
ನಿನ್ನಿಂದಲೇ,ನಿನ್ನಿಂದಲೇ

ಪ್ರತಿ ಕ್ಷಣದ ಉಸಿರು
ಜೀವನ ಹಸಿರು
ನಿನ್ನಿಂದಲೇ,ನಿನ್ನಿಂದಲೇ

ಇದಲ್ಲ ಪಡೆದಂತೆ
ಇದಲ್ಲ ಕಳೆದಂತೆ
ನೀನಿಲ್ಲದಿದ್ದರೂ ಏನೋ
ಯಾಕೆ ನೀನಿದ್ದಂತೆ

ನಯನದಲಿ ನಯನ ನಿನ್ನ
ಭುಜದಲಿ ಭುಜ ನಿನ್ನ
ನನ್ನಲ್ಲಿ ನನ್ನ ಏನೂ ಉಳಿಯಲಿಲ್ಲ
ಏನಾಗಿದೆ?
ಮಾತಲ್ಲಿ ಮಾತು ನಿನ್ನ
ರಾತ್ರಿ ಕನಸು ನಿನ್ನ
ಯಾಕೆ ಎಲ್ಲವೂ ನಿನ್ನದಾಯಿತು
ಏನಾಗಿದೆ?
ನಾನೆಲ್ಲಿಯೂ ಹೋದರೆ
ಭೇಟಿಯಾಗುವುದು ನಿನ್ನಿಂದಲೇ
ನಿನ್ನಿಂದಲೇ,ನಿನ್ನಿಂದಲೇ

ಸದ್ದಲ್ಲಿ ಮೌನವಿದೆ  
ಸ್ವಲ್ಪ ಪ್ರಜ್ಞೆ ಇಲ್ಲದಾಗಿದೆ
ನಿನ್ನಿಂದಲೇ,ನಿನ್ನಿಂದಲೇ

ಅರ್ಧ ಭರವಸೆ ಕೆಲವೊಮ್ಮೆ
ಅರ್ಧದಿಂದ ಹೆಚ್ಚಾಗಿ ಕೆಲವೊಮ್ಮೆ
ಮನಸ್ಸಾಗುತ್ತದೆ ಮಾಡುವೆ ಹೀಗೆ ಪ್ರೀತಿಯ
ಬಿಟ್ಟು ಬಿಡಲಾರದು ಎಂದಿಗೂ
ಮುರಿದು ಮುರಿಯಲಾರದು ಎಂದಿಗೂ
ಹೆಣೆದಿದ್ದೇನೆ ಈ ಅನುಬಂಧ ಪ್ರೀತಿಯ

ನಾ ನಿನ್ನ ಹಿಂಬಾಲಕ
ಅದೇನೋ ಆದೇನೋ ನಿನ್ನ ಮೂಲಕ
ನಿನ್ನಿಂದಲೇ,ನಿನ್ನಿಂದಲೇ
ಹಾದಿಯೂ ಸಿಗುವುದು
ಗಮ್ಯವೂ ಸಿಗುವುದು
ನಿನ್ನಿಂದಲೇ,ನಿನ್ನಿಂದಲೇ

ಇದಲ್ಲ ಪಡೆದಂತೆ
ಇದಲ್ಲ ಕಳೆದಂತೆ
ನೀನಿಲ್ಲದಿದ್ದರೂ ಏನೋ
ಯಾಕೆ ನೀನಿದ್ದಂತೆ

ಮೂಲ :ಈರ್ಶದ್ ಕಾಮಿಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೋಹಿತ್ ಚೌಹಾನ್
ಸಂಗೀತ : ಪ್ರೀತಂ
ಚಿತ್ರ : ಜಬ್ ವೀ ಮೆಟ್
Na hai yeh pana
Na Khona hi hai
Tera Na hona jane
Kyun hona hi hai

Tum se hi din hota hai
Surmaiye shaam aati
Tumse hi tumse hi

Har ghari saans aati hai
Zindagi kehlati hai
Tumse hi tumse hi

Na hai yeh pana
Na Khona hi hai
Tera Na hona jane
Kyun hona hi hai

Aankhon mein ankhen teri
Bahoon mein baahein teri
Mera na mujh mein kuch raha hua kya
Baaton mein baatein teri
Raatein saugatein teri
Kyun tera sab yeh ho gaya
hua kya
Mein kahin bhi jata hoon
Tumse hi mil jata hoon
Tumse hi tumse hi

Shor mein khamoshi hai
Thodi se Behoshi hai
Tum se hi tum se hi

Aadha sa wada kabhi
Aadhe se zayada kabhi
Jee chahe karlu is trah wafa ka
Chode na chote kabhi
Tode na tute kabhi
Jo dhaga tumse jud gaya wafa ka

Mein Tera sarmaya hoon
Jo bhi mein ban paya hoon
Tumse hi tumse hi
Raste miljate hai
Manzile miljati hai
Tumse hi tumse hi

Na hai yeh pana
Na Khona hi hai
Tera Na hona jane
Kyun hona hi hai
www.youtube.com/watch?v=Mh0D_dZEpGY

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...