ಡೋಲು, ಮುದ್ದಳೆ ಬಾರಿಸಿ
ವಾದ್ಯ ನುಡಿಸಿ
ಪತಾಕೆ ಹಾರಿಸಿ
ಸತ್ಯದ ಧ್ವಜವ ಏರಿಸಿ
ಭ್ರಷ್ಟಾಚಾರದಿಂದ ದೇಶವ ಉಳಿಸಿ
ವಾದ್ಯ ನುಡಿಸಿ
ಪತಾಕೆ ಹಾರಿಸಿ
ಸತ್ಯದ ಧ್ವಜವ ಏರಿಸಿ
ಭ್ರಷ್ಟಾಚಾರದಿಂದ ದೇಶವ ಉಳಿಸಿ
ಶುರು ಆಗಲಿದೆ ಹೊಸ ಯುಗ
ದೇಶ ಬೆಳಗಲಿದೆ ಜಗಮಗ
ಆಗಲಿದೆ ಭ್ರಷ್ಟಾಚಾರದ ಸೂರ್ಯಾಸ್ತ
ಮುಗಿಯಲಿದೆ ಜನರ ಕಷ್ಟಜಯ ಜಯ ಜಯ ಅಣ್ಣ
ತೆರೆದಿರಿ ನೀವು ಜನರ ಕಣ್ಣ
ನಿದ್ರೆಯಲ್ಲಿತ್ತು ಜನರ ದೇಶ ಭಕ್ತಿ
ನಿಮ್ಮ ಸತ್ಯದ ಹೋರಾಟದಿಂದ ಬಂತು ಶಕ್ತಿ
ಅಡಗಿತ್ತು ಜನರ ದೇಶ ಭಾವನೆಗಳ
ನಿಮ್ಮಿಂದ ಹೊರ ಚಿಮ್ಮಿತು ಅವರ ವಿಚಾರಗಳ
ಮರೆತ್ತಿದ್ದರು ಜನರು ತನ್ನ ಕರ್ತವ್ಯಗಳ
ನೆನಪಿಸಿ ಮಾಡಿದಿರಿ ಉಪಕಾರಗಳ
ಪಂಜನ್ನು ಹಚ್ಚಿ
ಸತ್ಯವನ್ನು ಮೆಚ್ಚಿ ಸುಳ್ಳನ್ನು ಕೊಚ್ಚಿ
ಮನವನ್ನು ಬಿಚ್ಚಿ
ಬನ್ನಿ ಹೋರಾಡುವ
ದೇಶಕ್ಕಾಗಿ ಸಮಯ ನೀಡುವ
ಭ್ರಷ್ಟಾಚಾರವನ್ನು ಆಚೆ ಅಟ್ಟುವ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment