Monday, August 1, 2011

ಮೂರು ಪ್ರಶ್ನೆ

ಅಪ್ಪ,  ನನ್ನ ಮನದಲ್ಲಿ ಇದೆ
ಮೂರು  ಪ್ರಶ್ನೆ
ಮಾನವೀಯತೆ ಅಂದರೆ ಏನು?
ಧರ್ಮ ಅಂದರೆ  ಏನು ?
ಪುಣ್ಯ ಅಂದರೆ ಏನು ?
ಅಪ್ಪ ಈ ಪ್ರಶ್ನೆಗಳಿಗೆ ಉತ್ತರ ನೀಡುವಿರಾ?
ನನ್ನ ಶಂಕೆಯನ್ನು ದೂರ ಮಾಡುವಿರಾ?
ಕಂದಾ,  ನಿನ್ನ ಎಲ್ಲ ಪ್ರಶ್ನೆಗಳಿಗೆ
ಒಂದೇ ನನ್ನ ಉತ್ತರ 
ಸದಾ ಇದನ್ನೇ 
ಗಂಟು ಕಟ್ಟಿಕೋ ನಿನ್ನ ಹತ್ತಿರ
ಬೇರೆಯವರ ಆರೈಕೆ,
ಬೇರೆಯವರ ನೋವಿನ ಅರಿವು,
ಬೇರೆಯವರ ತೊಂದರೆಯ ತಿಳುವಳಿಕೆ
ಬೇರೆಯವರ ಪ್ರತಿ ಅನುಕಂಪ
ಹಾಗು ಸಹಾನುಭೂತಿ
ಇದೇ ಮಾನವೀಯತೆ......
ಇದೇ ಧರ್ಮ......
ಹಾಗು ಇದೇ ಪುಣ್ಯ ...
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...