Monday, August 8, 2011

ಮುದಿ ವಯಸ್ಸು

ಜೀವನ ಕಳೆಯಿತು
ಪ್ರಾಮಾಣಿಕತೆಯಿಂದ  ಜವಾಬ್ದಾರಿ ನಿಭಾಯಿಸುತ
ಮಕ್ಕಳಲ್ಲಿ ಪ್ರೀತಿ ಪ್ರೇಮ ಹಂಚುತ
ಅವರ ಅವಶ್ಯಕತೆಗಳನ್ನು ಪೂರೈಸುತ್ತ

ಮಗಳ ಮದುವೆ,
ಮಗನ ವಿಧ್ಯಾಬ್ಯಾಸ
ಅವನ ಮದುವೆ
ಎಲ್ಲವೂ ಸಂಭ್ರಮದೊಂದಿಗೆ ಜರುಗಿಸಿದೆ
ಅವರ ಹೊಸ ಜೀವನದ ಪ್ರಾರಂಭಕ್ಕೆ
ತನ್ನ ಆಸ್ತಿ ಐಶ್ವರ್ಯವನ್ನು  ಅವರಿಗೆ ಅರ್ಪಿಸಿದೆ

ಇನ್ನು ಸಂತೋಷ ಆನಂದದಿಂದ
ತನ್ನ ಬರುವ ಮೊಮ್ಮಕ್ಕಳ ಒಟ್ಟಿಗೆ ಆಡುತ
ನಾವಿಬ್ಬರು ಜೀವನ ಆರಾಮದಿಂದ ಕಳೆಯುವೆವು
ಎಂದು ಮನದಲ್ಲಿ ಖುಷಿ ಅಡಗಿತ್ತು
ಆದರೆ ಅವಳು ನಡು ಹಾದಿಯಲ್ಲಿ
ನನ್ನನ್ನು ಬಿಟ್ಟು ಮುಕ್ತಲಾದಳು

ಓಡಿತು ಸಮಯದ ಬಂಡಿ
ಮಗನ ಬೇರೆಯೇ ಜೀವನ
ಆಯಿತು ನನ್ನದ್ದು ಒಂಟಿ ಜೀವನ
ನಾನು ಆಗಿದೆ ಬೇಡವಾದ ವಸ್ತು
ಒಂದು ದಿನ ಮಗ ಹೇಳಿ ಬಿಟ್ಟ
ನೋಡಿ ನಿಮ್ಮ ರಸ್ತೆ
ನಾನು ಆದೆ  ಸುಸ್ತು

ಈ ಮುದಿ ವಯಸ್ಸಿನಲ್ಲಿ
ಎಲ್ಲಿಗೆ ಹೋಗಲಿ
ಬೇಡಿದೆ ನಾ
ಕೇಳಲಿಲ್ಲ ನನ್ನ
ಬಿಸಾಕಿ ಬಿಟ್ಟರು ಹೊರಗೆ ನನ್ನ


ಕೈ ಒಂದು ನನ್ನ ಬೆನ್ನ ಮೇಲೆ
ನನ್ನ ಒಬ್ಬ ಮುದಿ ಮಿತ್ರ
ಕಣ್ಣಿರು ಹರಿಯಿತು
ಒರೆಸಿದ ನನ್ನ ಕಣ್ಣಿರು
"ಬಾ ಗೆಳೆಯ ಒಟ್ಟಿಗೆ ಬಾಳೋಣ
ನಮ್ಮಂತ ಮುದಿ ವಯಸ್ಸಿನ
ಗೆಳೆಯರೊಂದಿಗೆ ಈ ಜೀವನ ಕಳೆಯೋಣ"
by .ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...