ಕೇಳಿದೆ ನಾ ದೀಪವ
"ಸ್ವತಃ ಕತ್ತಲೆ ಆವರಿಸಿ,
ತನ್ನನ್ನು ಉರಿಸಿ,
ಬೇರೆಯವರಿಗೆ ಬೆಳಕು ನೀಡುತಿ,
ಏಕೆ ನಿನಗೆ ಈ ಕಷ್ಟ ?"
ದೀಪ ಹೇಳಿತು ನಕ್ಕು
" ನನಗಿಲ್ಲ ಏನೂ ಕಷ್ಟ
ನನಗೆ ಇದೇ ಇಷ್ಟ
ನನ್ನಿಂದ ಸಂದೇಶ ಸ್ಪಷ್ಟ
ನೀವೂ ನನ್ನಂತೆ ಜೀವನ ಸಾಗಿಸಿ
ನನ್ನಂತೆ ಉರಿದು ಬೇರೆಯವರ ಬಾಳನ್ನು ಬೆಳಗಿಸಿ "
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment