ಇದು ಕಟ್ಟು ಕಥೆಯಲ್ಲ
ಇದೇ ಸತ್ಯ ಗೆಳತಿ
ಅವನಿಲ್ಲ ಇನ್ನು
ತನ್ನನ್ನು ಸಾವರಿಸಿಕೋ ಗೆಳತಿ
ಕ್ರೂರ ಮೌನವ ಕೂಗುತ್ತಿದೆ
ನಿನ್ನ ಅಳುವಿಗಾಗಿ ಕಾಯುತ್ತಿದೆ
ಕಣ್ಣಿರ ಸುರಿಸು ಗೆಳತಿ
ನಿನಗೂ ಅಳ ಬೇಕಾಗುತ್ತದೆ ಗೆಳತಿ
ಈ ಎಲ್ಲ ಹೊಸ ಮುಖಗಳು
ಬರುವ ನವ ಜನಗಳು
ದುಃಖಿಸುವ ಅಪರಿಚಿತರು
ನೀನೂ ಸ್ವಲ್ಪ ವಿಲಪಿಸು ಗೆಳತಿ
ಮನೆ ಎಲ್ಲ ತುಂಬಿದೆ
ಶೋಕದಲ್ಲಿ ಬೆಂದಿದೆ
ಗಾಳಿ ಬರಲು ದಾರಿ ಇಲ್ಲದೆ ಮಲಗಿದೆ
ಸ್ವಲ್ಪ ನಮಗೆ ಉಸಿರಾಡಲು ಕೊಡು ಗೆಳತಿ
ರವಿಯು ಕಪ್ಪಾಗಿದೆ
ಚಂದ್ರನ ಪ್ರಯಾಣ ಸುರುವಾಗಿದೆ
ದಿನ ಉದಯಿಸಲು ಕಾಯುತ್ತಿದೆ
ಸ್ವಲ್ಪ ರೋದಿಸು ಗೆಳತಿ
ಹೋದ ಅವನು ಕೈಯ ಕೊಟ್ಟು
ಕನಸೆಲ್ಲ ಹೋಯಿತು ಸುಟ್ಟು
ಪಶ್ಚಾತ್ತಾಪ ಪಡಲು ಹೋದ ಬಿಟ್ಟು
ಅಳು ಗೆಳತಿ, ಅಳು ಗೆಳತಿ
No comments:
Post a Comment