Friday, August 26, 2011

ಹೊಸ ಬೆಳಕು

ನಡೆಯುತ್ತಿದ್ದೆ ಹೀಗೆಯೇ ಹಾದಿಯಲಿ  
ತನ್ನದೇ ದೀರ್ಘ ಯೋಚನೆಯಲಿ
ಹಲವು ವಿಚಾರಗಳು ಮನದಲಿ

ಸುಪ್ತವಾದ ಕಾರ್ಯಗಳು
ಕೆಲಸದ ಸಮಸ್ಯೆಗಳು
ಮನೆಯ ಕಲಹಗಳು
ತುಂಡಾದ ಸಂಬಂದಗಳು

ಹಣದ ಅಭಾವಗಳು
ಜೂಜಿನ ಸೋಲುಗಳು
ತೀರಿಸುವ ಸಾಲಗಳು
ಸಿಕ್ಕುವ ಬೆದರಿಕೆಗಳು 

ಜೀವನದ ಸವಾಲುಗಳು
ಅನೇಕ ಕಷ್ಟಗಳು
ನಿರಾಸೆಯ ಅಲೆಗಳು
ಕಾಣದ ತಾಣಗಳು

ನಡೆಯುತ್ತಲೇ ಹೋಗುತ್ತಿದ್ದೆ
ವಿಚಾರಗಳ ಮಂಥನದಲ್ಲಿ
ಕಂಡೆ ಚಿಕ್ಕದೊಂದು ಕಲ್ಲು ಹಾದಿಯಲ್ಲಿ
ಎತ್ತಿ ಕೊಂಡೆ ಕೈಯಲ್ಲಿ
ಕಲ್ಲು ಇತ್ತು ದೇವ ಗಣೇಶನ ಆಕಾರದಲ್ಲಿ

ಕಲ್ಲಲ್ಲಿ ಅದೃಷ್ಟ ಕಂಡಿತು  
ಆಸೆ ಒಂದು ಚಿಗುರಿತು
ಮನದ ಹೂವು ಅರಳಿತು
ಜೀವನದಲ್ಲಿ ಹೊಸ ಬೆಳಕಾಯಿತು
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...