Sunday, August 14, 2011

ಸ್ವಾತಂತ್ರ್ಯ ಎಲ್ಲಿದೆ ?

ಸ್ವಾತಂತ್ರ್ಯ ಎಲ್ಲಿದೆ ?

ಮಕ್ಕಳನ್ನು ಹೆತ್ತು
ಮುದ್ದಾಗಿ ಸಾಕಿ ಬೆಳೆಸಿ
ಜೀವನ ಅವರ
ಬಾಳಿಗಾಗಿ  ಕಳೆಯುವ
ತ್ಯಾಗದ ಮೂರ್ತಿ ತಾಯಿಗೆ
ಸ್ವಾತಂತ್ರ್ಯ ಎಲ್ಲಿದೆ ?

ಮನುಜ ಕುಲದಲ್ಲಿ ಹುಟ್ಟಿ
ಮನುಜನಾಗಿ ಬಾಳದೆ
ತನ್ನಲ್ಲಿದ್ದ ಮನುಜನನ್ನು
ಕೊಂದು ದುರ್ಜನನಾಗಿ
ಬದುಕುವ ದುಷ್ಟ ಮನುಜನಿಗೆ
ಸ್ವಾತಂತ್ರ್ಯ ಎಲ್ಲಿದೆ ?

ತನ್ನ ಇಚ್ಛೆ ಆಕಾಂಕ್ಷೆಗಳನ್ನು
ಮರೆತು ಪೋಷಕರ
ಇಚ್ಚೆಯಂತೆ ನಡೆದು
ತನ್ನ ಜೀವನವನ್ನು
ನಿರಾಸೆಯಿಂದ ಜೀವಿಸುವ
ಅಸಹಾಯಕ ಮಕ್ಕಳಿಗೆ 
ಸ್ವಾತಂತ್ರ್ಯ ಎಲ್ಲಿದೆ ?

ಭ್ರಷ್ಟಾಚಾರದಲ್ಲಿ ಲಿಪ್ತನಾದ
ಹಾಳು ಪಿಸಾಚಿ
ರಾಜಕಾರಣಿಯ ದುಷ್ಟ
ಕೃತ್ಯವನ್ನು ಸಹಿಸಿ
ಅವನನ್ನೇ ಧ್ವಜ ವಂದನೆ
ಮಾಡುವುದನ್ನು ನೋಡಿ 
ಬಾಯಿ ಮುಚ್ಚಿ ಕೊಂಡು
ತಮಾಷೆ ನೋಡುವ ಜನರಿಗೆ
ಸ್ವಾತಂತ್ರ್ಯ ಎಲ್ಲಿದೆ ?
by  ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...