Wednesday, August 3, 2011

ಯಾರಿಗೆ ಬೇಕು ಈ ಜಗ

ಯಾರಿಗೆ ಬೇಕು ಈ ಜಗ
ಮನುಷ್ಯನಾಗಿದ್ದಾನೆ ಮೃಗ......!

ಕೊನೆ ಇಲ್ಲದ ಆಸೆ
ಎಲ್ಲದಲ್ಲೂ ದುರಾಸೆ
ಅಹಂಕಾರದ ಗುಲಾಮ
ಅವನು ಹೇಳಿದೆಲ್ಲ ಸಮ ಸಮ.....!

ಪರ ಕಷ್ಟದ ಇಲ್ಲ ಧ್ಯಾನ
ಅವನದೇ ಮಾನ
ಸ್ವತ ಅವನೇ ಜಾಣ
ಸ್ವಾರ್ಥ ಕೂಡಿದೆ ಕಣ ಕಣ.....!

ಅವನಿಲ್ಲ ತೃಪ್ತ
ಲಂಚ ಬೇಕು ಗುಪ್ತ
ಯಾರಿಲ್ಲ ಅವನ ಆಪ್ತ
ಅವನದೆಲ್ಲ ಸುಪ್ತ ಸುಪ್ತ.....! 
ಅವನಲ್ಲಿಲ್ಲ ಮಾನವ
ನೆಲೆಸಿದ್ದಾನೆ ದಾನವ
ಮಾಡುವುದೆಲ್ಲ ದುಷ್ಕರ್ಮ
ಅಧರ್ಮವೇ ಅವನ ಧರ್ಮ ಧರ್ಮ......!
ಯಾರಿಗೆ ಬೇಕು ಈ ಜಗ
ಮನುಷ್ಯನಾಗಿದ್ದಾನೆ ಮೃಗ......!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...