Tuesday, August 2, 2011

ಇನ್ನೊಂದು ಜೀವನ

ಅವನ  ಮದುವೆ
ಸಂಸಾರದ ಪ್ರಾರಂಭ
ಸಂತೋಷ ಉಲ್ಲಾಸ
ಉತ್ಸವ ಆನಂದ

ಪತ್ರ ಒಂದರ ಆಗಮನ
ತುರ್ತು ಯುದ್ಧದ ಸೂಚನೆ
ದೇಶದ ಕರೆ
ಅವನು ಹೋಗಲು ಕೂಡಲೇ ಸಿದ್ದ

ಅವಳ ವೇದನೆ
ತಾಯಿಯ ಸಂಯಮ
ತಂದೆಯ ಧೈರ್ಯ
ಹೊರಟ ಹೋರಾಟಕ್ಕೆ

ಯುದ್ದದ ವಾತಾವರಣ
ಅವಳ ಏಕಾಂತ ಜೀವನ
ಕಾಯುತ್ತಿದ್ದಳು  ದಿನ ದಿನ
ಎಲ್ಲಿಯೂ ಇಲ್ಲ ಅವಳ ಮನ
ಯಾವಾಗ ಬರುವನು?
ಮುಗಿಯುತ್ತದೆಯೇ ಈ ಯುದ್ದ ?
ಇದೆಲ್ಲ ವಿಚಾರ.......

ಎಂತು ಬಂತು ಒಂದು ಪತ್ರ
ಬಂದರು ಕೆಲವರು ಒಟ್ಟಿಗೆ
ಜೊತೆಗೆ ಶವಪೆಟ್ಟಿಗೆ
ಕಣ್ಣಿರೊಂದು ಬಿತ್ತು
ದೇಶಕ್ಕಾಗಿ ಇನ್ನೊಂದು ಬಲಿದಾನ
ಅವಳ ಅಸೆ , ಆಕಾಂಕ್ಷೆಗಳ ಬಲಿದಾನ
ಕಂಪಿಸಿತು ಅವಳ ತನ
ಕ್ಷಣದಲ್ಲೇ ಮುಗಿದಿತ್ತು ಅವಳ ಜೀವನ
ಸಿಗುವುದೇ ಅವಳಿಗೆ ಇನ್ನೊಂದು ಜೀವನ?
by ಹರೀಶ್ ಶೆಟ್ಟಿ, ಶಿರ್ವ


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...