Wednesday, August 10, 2011

ಕರುಣಮಾಯಿ

ಕರುಣಮಾಯಿ
ಅವನು ಅವಳನ್ನು ಕರೆದದ್ದು ಇದೇ ಹೆಸರಿನಲ್ಲಿ
ಅವಳ ನಿಜ ಹೆಸರು ಮುಚ್ಚಮ್ಮ
ಎಲ್ಲರೂ ಅವಳನ್ನು ಇದೇ ಹೆಸರಲ್ಲಿ ಕರೆಯುತ್ತಿದ್ದರು

ಅವಳು ವಿಧವೆ
ಅವಳಿಗೆ ಮಕ್ಕಳಿಲ್ಲ
ಸಂಬಂಧಿಕರು ಇದ್ದು ಇಲ್ಲ
ಹೀಗೆಯೇ ಒಂಟಿ ಜೀವನ ಕಳೆದು ಕಳೆದು
ಕಂಡಳು ಒಂದು ಅನಾಥನನ್ನು
ಅವನನ್ನು ನೋಡಿ ಮನ ತುಂಬಿ ಬಂದು
ಅವನನ್ನು  ಕರೆದು ಕೊಂಡು ಬಂದಳು ಮನೆಗೆ

ಅವಳ ಜೀವನಕ್ಕೆ ಸಿಕ್ಕಿತು ಒಂದು ಗುರಿ
ಹಿಗಿಯೇ ಹಲವು ಅನಾಥರನ್ನು ಮನೆಗೆ
ಕರೆದು ಕೊಂಡು ಬಂದಳು ಬಾರಿ ಬಾರಿ
ಈಗ ಅವರೇ ಅವಳ ಜೀವನ

ಸಂಜು,ಹರಿ,ಮೀನಾ,ಮಂಜು,ನಿಹಾರಿಕ
ಮುದ್ದಾದ ಮಕ್ಕಳು
ಇವರೆಲ್ಲರೂ ಅವಳ ಸಂಸಾರ
ತನ್ನ ಎಲ್ಲ ಪ್ರೀತಿಯನ್ನು ಕೊಟ್ಟಳು ಅವರಿಗೆ
ಜೀವನ ಬಂತು ಒಂದು ದಾರಿಗೆ

ಮುಚ್ಚಮ್ಮ ಆಸ್ತಿವಂತಳಲ್ಲ
ಅವಳು ಬಡವಿ
ದುಡಿಯುತ್ತಿದ್ದಳು ಅಲ್ಲಿ ಇಲ್ಲಿ
ಅಷ್ಟರಲ್ಲೇ  ತೃಪ್ತಿ, ಸಂತೋಷ
ಮಕ್ಕಳ ಒಟ್ಟಿಗೆ ಸುಖ ದುಃಖ ಹಂಚುತ
ಅದರಲ್ಲೇ ಅವಳಿಗೆ ಹರ್ಷ

ಮಕ್ಕಳಿಗೆ ಅವಳೆಂದರೆ ಜೀವ
ಅವಳೇ ಅವರ ಬಾಳಿಗೆ ದೇವ
ಮುಚ್ಚಮ್ಮ ಮುಚ್ಚಮ್ಮ ಎಂದು ಕರೆದು
ಅವಳ ಹಿಂದೆಯೇ ಇಡಿ  ದಿನ

ದಿನ ಹಕ್ಕಿಯಂತೆ ಹಾರುತ್ತಿತ್ತು
ಮಕ್ಕಳು ಹೆಚ್ಚು ಆದಂತೆ
ಕಷ್ಟಗಳು ಏರಿತು
ನನ್ನಿಂದ ಏಕೆ ಮಕ್ಕಳಿಗೆ ಕಷ್ಟ
ಬಂದಳು ಒಂದು ನಿರ್ಧಾರಕ್ಕೆ
ಕೊಡುವೇನು ಯಾರಿಗಾದರೂ ದತ್ತಕ
ಅವರು ಒಳ್ಳೆಯಿಂದ ಸಾಕುವರು ಇವರನ್ನ

ಅವನಿಗೆ ಮಕ್ಕಳಿಲ್ಲ
ಮಕ್ಕಳು ಬೇಕೆಂದು ಆಸೆ
ಕೇಳಿದ ಮುಚ್ಚಮ್ಮಳ ಬಗ್ಗೆ
ಬಂದ ಅವಳ ಹತ್ತಿರ ಹೆಂಡತಿಯ ಒಟ್ಟಿಗೆ
ಚಿಕ್ಕ ಮುದ್ದು ಹುಡುಗಿ ನಿಹರಿಕಾಳನ್ನು  ನೋಡಿ
ಮಮತೆ ಮೂಡಿತು ಅವರಿಗೆ
ಈ ಪುಟ್ಟ ಹುಡುಗಿ ಆಗುವಳು ನಮ್ಮ ಮಗಳು
ಇದರಿಂದಲೇ ಸೋಗಸಾಗುವುದು ನಮ್ಮ ಬಾಳು

ಮುಚ್ಚಮ್ಮಳ ಕಣ್ಣೀರು ಸುರಿಯಿತು,
ನಿಹಾರಿಕಾಳಿಗೆ ಎಲ್ಲ ಅರಿಯಿತು,
ನಾನು ಹೋಗುವುದಿಲ್ಲ ಎಂಬ ಒಂದೇ  ಹಠ,
ಹೊಡೆದಳು,ಬಡಿದಳು,
ಬೇಡಿದಳು ನಿಹರಿಕಾಳಿಂದ
ನಿಹಾರಿಕಾ ದುಃಖಿಸಿ ನುಡಿದಳು
ನಾನು ಕೇಳುವುದಿಲ್ಲ ಹೊಸ ಬಟ್ಟೆ
ನನಗೆ ಕೇಳುವುದಿಲ್ಲ ಊಟ ಅನ್ನ
ನನಗೆ  ಕಳಿಸ ಬೇಡಿ ಮುಚ್ಚಮ್ಮ

ಹೇಗೋ ಕಳಿಸಿದಳು ಅವಳನ್ನ,
ಕೂಗಿತು ಅವಳ ಮನ
ಮಕ್ಕಳೆಲ್ಲ ಶಾಂತ
ಅವರನ್ನು ನೋಡಿ
ಅತ್ತು ಅತ್ತು ತಡೆಯಲಾರದೆ ಓಡಿದಳು
ಅವನ ಮನೆಯ ದ್ವಾರ
ಜ್ಞಾನ ತಪ್ಪಿ ಬಿದ್ದಳು ಅಲ್ಲೇ
ಕತ್ತಲು ಕಳೆದು  ಬೆಳಕಾಯಿತು

ದ್ವಾರ ತೆಗೆಯುತ್ತಲೇ
ಅವನು ಕಂಡ ಮುಚ್ಚಮ್ಮಳನ್ನು
"ನನಗೆ ನಿಹಾರಿಕಾ ಕೊಡಿ ಸ್ವಾಮಿ"
ಬೇಡಿದಳು ಅವಳು
ಅವಳನ್ನು ಸಾವರಿಸಿ 
ಅವಳನ್ನೇ ನೋಡುತಾ ಹೇಳಿದ ಅವನು
"ಮುಚ್ಚಮ್ಮ ನೀ ದಯಾ ಸಾಗರ
ನೀನು ಒಂದು ದೇವಿಯ ಅವತಾರ
ಈ ಮಕ್ಕಳ ಬಾಳಿನ ನೀನೇ ಹೆತ್ತಾಯಿ
ಈ ಮಕ್ಕಳಿಗೆ ನೀನೇ ತಾಯಿ
ನೀನು ...ಕರುಣಾಮಯಿ ಎಲ್ಲರ ತಾಯಿ
ನಿನಗೆ ನೀಡುವೆ ಒಂದು ಬಿರುದು ನಾನು ...ನೀನು "ಕರುಣಮಾಯಿ "
.by ಹರೀಶ್ ಶೆಟ್ಟಿ,ಶಿರ್ವ





No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...