Sunday, August 21, 2011

ಕೃಷ್ಣ ಬಂದ ಕೃಷ್ಣ ಬಂದ

ಕೃಷ್ಣ ಬಂದ  ಕೃಷ್ಣ ಬಂದ
ಆನಂದ, ಉಲ್ಲಾಸ ತಂದ

ಗೋಕುಲ ಕುಮಾರ ನಂದ
ಯಶೋದ ಕಂದ ಮುಕುಂದ
ಸುಂದರ  ಬಲು ಚೆಂದ

ಕೃಷ್ಣ ಬಂದ  ಕೃಷ್ಣ ಬಂದ
ಆನಂದ, ಉಲ್ಲಾಸ ತಂದ

ಹಾಲು, ಮೊಸರ ತಿಂದ
ಆಡಿ ಓಡಾಡಿ ಬಂದ
ಗೋಪಿಯರ ದೂರು ತಂದ

ಕೃಷ್ಣ ಬಂದ  ಕೃಷ್ಣ ಬಂದ
ಆನಂದ, ಉಲ್ಲಾಸ ತಂದ

ಪುತಾನ, ಅಘಾಸುರನನು  ಕೊಂದ
ಇಂದ್ರನ ಅಹಂಕಾರ ಅರಿವಿಗೆ ತಂದ
ಗೋವರ್ಧನ ಪರ್ವತ ಎತ್ತಿ ಕೊಂಡ

ಕೃಷ್ಣ ಬಂದ  ಕೃಷ್ಣ ಬಂದ
ಆನಂದ, ಉಲ್ಲಾಸ ತಂದ

by  ಹರೀಶ್ ಶೆಟ್ಟಿ, ಶಿರ್ವ

1 comment:

  1. ನಮಸ್ತೆ ನನಗೆ ಮೇಲೆ ನೀವು ಹಾಕಿದ ಫೋಟೋ ದ ಹೈ ರೆಸೊಲುಸನ್ ಫೋಟೋ ಕಳಹಿಸಿಕೊಡಲು ಸಾಧ್ಯವೇ ? ಇದು ಯಾರ ಪೈಂಟಿಂಗ್ ? ನಿಮ್ದೇ ಅಥವಾ ಮಾಹಿತಿ ಇದೆಯಾ? ಈ ಬಗ್ಗೆ ಮಾಹಿತಿ ಇದ್ದರೆ ನನಗೆ ತಿಳಿಸಿ ಙಗೆ ಈ ಫೋಟೋ ಬೇಕಾಗಿತ್ತು.ನನ್ನನ್ನು 9470516684 ಮ‌ೂಲಕ ಅಥವಾ samagramahithi@gmail.com ಮೂಲಕ ಸಂಪರ್ಕಿಸಿ ಬಹುದು, ನಿಮ್ಮ ಸಂಪರ್ಕ ಸಂಖ್ಯೆ ನೀಡಿರಿ ,ಧನ್ಯವಾದಗಳು - ಡಾ‌.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕಿ, ಸರ್ಕಾರಿ ಪಿಯು ಕಾಲೇಜು ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆ

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...