Monday, August 15, 2011

ಧ್ವಜದ ದುರ್ದೆಸೆ

ಕೇಳಿದೆ ನಾ ತ್ರಿವರ್ಣ ಧ್ವಜವನ್ನು
"ನಿನ್ನನ್ನು ಏರಿಸುತ್ತಾರೆ ಎತ್ತರ
೨೬ ಜನವರಿ ಹಾಗು ೧೫ ಆಗಸ್ಟ್ ರಂದು
ಗೌರವಿಸುತ್ತಾರೆ  ಅಭಿಮಾನದಿಂದ
ಬೇರೆ ಸಮಯ ಅವರಿಗೆ ನೀನೊಂದು ಪ್ರದರ್ಶನದ ವಸ್ತು
ಅಲ್ಲದೆ ರಸ್ತೆಯಲ್ಲಿ ಬಿದ್ದು ಹಾರಾಡುವ ತುಣುಕು"
ಬೇಸರವಿಲ್ಲವೇ  ನಿನಗೆ ?
ಭಾರತ ದೇಶದ ಧ್ವಜ ವಾಗಿ
ಭಾರತದಲ್ಲೇ ನಿನ್ನ ಗತಿ ಈಗೆ ಯಾಕೆ?
ವರ್ಷದ ಈ ಎರಡು ದಿವಸದ ಗೌರವ ನಿನಗೆ ಬೇಕೇ?

ತ್ರಿವರ್ಣ ಧ್ವಜ ಹೇಳಿತು ದುಃಖದಿಂದ
"ನಿಮ್ಮ ಮನದಲ್ಲಿ ನನಗೆ ಸದಾ ಗೌರವ ಇದೆ
ಆದರೆ ಬಡತನ, ಭ್ರಷ್ಟಾಚಾರದಿಂದ
ನಿಮಗೆ  ಮನಶಾಂತಿ ಇಲ್ಲದಾಗಿದೆ
ನನಗೆ ಈ ಗೌರವ ೩೬೫ ದಿವಸ ಬೇಕಾಗಿದೆ
ಆದರೆ ಈಗ ದೇಶದ ಸ್ಥಿತಿ ಗಂಭೀರವಾಗಿದೆ
ನನ್ನ ಮರ್ಯಾದೆ ಬೀದಿ ಪಾಲಾಗಿದೆ,
ದೇಶದ ಅಭಿಮಾನವಾದ ನನಗೆ
ನನ್ನದೇ ಅವಸ್ಥೆ  ದಯನೀಯವಾಗಿದೆ
ರಾಜಕಾರಣಿಗಳ ದುರಾಶೆಯಿಂದ
ನನ್ನ ಬಾಳೆ ಅಪಾಯಕಾರಿಯಾಗಿದೆ "
ನನ್ನ ತಲೆ ತಗ್ಗಿಸ ಬೇಡ ಮಾನವ
ದೇಶ ಪ್ರೇಮದ ಚಿಹ್ನೆಯಾದ ನನಗೆ
ಒಂದು ಪ್ರದರ್ಶನದ ವಸ್ತು ಹಾಗು
ರಸ್ತೆಯಲ್ಲಿ ಬಿದ್ದು ಹಾರಾಡುವ ತುಣುಕಾಗಿ
ಅಗೌರವ ತೋರಿಸ ಬೇಡ ಮಾನವ"
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...