ಏಕೆ ನನ್ನ ಮೈ ರೋಮಾಂಚಿತವಾಗುತ್ತಿದೆ
ಏಕೆ ನನ್ನ ಹೃದಯ ಮನಸ್ಸು ಪ್ರೀತಿಯ ಹಾಡು ಹಾಡುತ್ತಿದೆ
ಏಕೆ ಜಗವೆಲ್ಲ ಸುಂದರ ಮನಮೋಹಕ ಕಂಡು ಬರುತ್ತಿದೆ!
ಹೇಗೆ ಈ ಬದಲಾವಣೆ ಆಯಿತು
ಹೇಗೆ ನಿಂತಿದ ಬಯಕೆಯ ನೀರು ವೇಗದಿಂದ ಹರಿಯಲಾರಂಭಿಸಿತು
ಹೇಗೆ ನನ್ನ ಹೃದಯ ಬಡಿತದಲ್ಲಿ ಸಂಗೀತ ಕೇಳಲಾರಂಭಿಸಿತು
ಹೇಗೆ ನನ್ನ ಕಣ್ಣು ನಕ್ಷತ್ರಗಳಂತೆ ಮಿನುಗಲಾರಂಭಿಸಿತು!
ಈಗ ನನ್ನಲ್ಲಿ ಆದ ಪರಿವರ್ತನೆ ನಾನು ಗಮನಿಸುತ್ತಿದ್ದೇನೆ
ಈಗ ನನ್ನನ್ನು ನಾನೇ ಇಷ್ಟ ಪಡುತ್ತಿದ್ದೇನೆ
ಈಗ ನನ್ನನ್ನು ನಾನೇ ಹೊಗಳುತ್ತಿದ್ದೇನೆ
ಈಗ ನನ್ನನ್ನು ನಾನೇ ಪ್ರೀತಿಸುತ್ತಿದ್ದೇನೆ!
ಮನಸ್ಸಾಗುತ್ತದೆ ಹಕ್ಕಿಯಂತೆ ಹಾರಲೆಂದು
ಕನಸ ಮೋಡಗಳಿಂದ ನನಸ ಮಳೆ ಸುರಿಸಲೆಂದು
ಭಾವದ ಹೂವನ್ನು ಹೆಕ್ಕಿ ಪ್ರೀತಿಯ ಕಾವ್ಯ ಮಾಲೆ ಹೆಣೆಯಲೆಂದು
ಸೃಷ್ಟಿಯ ಎಲ್ಲ ಸುಂದರತೆಯನ್ನು ತನ್ನಲ್ಲಿ ಸೃಷ್ಟಿಸಲೆಂದು!
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment