ನನ್ನ ಭಾವನೆಗಳು ಅಕ್ಷರ ರೂಪ ಪಡೆಯಿತು
ಅವನು ತನ್ನ ದೀಪದಿಂದ ನನ್ನ ದೀಪ ಹಚ್ಚಿರಬೇಕು
ನನ್ನ ಜ್ಞಾನ ದೀಪ ಪ್ರಕಾಶಮಯವಾಯಿತು
ಅವನು ಭೂಮಿಯಲಿ ವಾಸಿಸುವ ಸೂರ್ಯನಾಗಿರಬೇಕು
ನನ್ನ ಅಂಧಕಾರದಲ್ಲಿ ಜ್ಞಾನದ ಪ್ರಕಾಶ ಚೆಲ್ಲುತಿರುವನು
ಅವನು ಮಾತಾ ಸರಸ್ವತಿಯ ದೂತನಿರಬೇಕು
ಅವನ ಸಹವಾಸ ಮಾತ್ರದಿಂದ ನನಗೆ ಜ್ಞಾನೋದಯವಾಯಿತು
ಅವನು ಮಹಾ ದಾನಿ
ಅವನಿಂದ ದಾನ ಪಡೆದವನು ಇಂದು ಅಕ್ಷರ ಜ್ಞಾನಿ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment