Tuesday, July 17, 2012

ಮೌನ

ಎಷ್ಟು ಕಷ್ಟ ಅಲ್ಲವೇ
ಮೌನ ಇರುವುದು
ಆದರೆ ಕೆಲವು ಸಮಯ
ಅದೇ ಒಳ್ಳೆಯದು ಎನಿಸುತ್ತದೆ !

ನಿರಂಕುಶ ನಾಲಿಗೆ
ಬೊಂಬಾಟ್ ಬಾಯಿ
ಮಾತನಾಡಿ ಏಕೆ ನಿಷ್ಠುರ ಆಗುವುದು
ಮೌನವೇ ಒಳಿತಲ್ಲವೇ !

ಆದರೆ ಮೌನ ಬಂಧನವಾದರೆ
ಸಂಬಂಧ ಮುರಿದರೆ
ಮೌನ ಇರುವುದೇ ಸರಿಯಲ್ಲ ಅಲ್ಲವೇ
ಮೌನ ಇರುವುದಕ್ಕು ಒಂದು ಮಿತಿ ಇರಬೇಕು !

ಮೌನ ಕಣ್ಣೀರಿಡುವಾಗ
ಅರ್ಥೈಸುವವರೇ ಕೇವಲ ನಮ್ಮವರು ಹೌದು
ಆದರೆ ಸುಳ್ಳು ಆಶ್ವಾಸನೆ ಬೇಡ ಅಲ್ಲವೇ
ಕೇವಲ ವಿಶ್ವಾಸ ಇರಬೇಕಲ್ಲವೇ !

ಹಲವು ಸಮಯ
ಮೌನದಲ್ಲಿಯೂ ಸಂವಾದ
ಮೌನ ಇದ್ದಂತೆ
ನಡೆಯುತ್ತಲೇ ಇರುತ್ತದೆ ಮೂಕ ಸಂಭಾಷಣೆ!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...