ಈ ಕಣ್ಣೀರನ್ನು ಅಡಗಿಸಿ
ಏಕೆ ನಗುವೆ ಪ್ರಿಯೆ
ನಿನ್ನ ಮುಖದಲ್ಲಿ ಕಾಣುವ
ವಿಷಾದ ಬೇರೆಯೇ ಕಥೆ
ಹೇಳುತ್ತಿದೆ ಪ್ರಿಯೆ !
ನಿನ್ನ ನೆರಳು ನಾನು ಎಂದು
ನಿನಗೆ ತಿಳಿದಿಲ್ಲವೇ ಪ್ರಿಯೆ
ಸಪ್ತಪದಿ ತುಳಿದು ನನ್ನ
ಜೀವನದಲ್ಲಿ ನೀ ಬಂದಿರುವೆ ಎಂದು
ಮರೆತು ಹೋದೆಯೇ ಪ್ರಿಯೆ!
ನಿನ್ನ ಈ ನಗುವಿನ ಹಿಂದೆ
ಅಡಗಿದ ರಹಸ್ಯವನ್ನು ಒಮ್ಮೆ
ಹೇಳು ಪ್ರಿಯೆ
ತುಂಬಿದ ಕಣ್ಣೀರನ್ನು ಒಮ್ಮೆ
ಹೊರ ಚೆಲ್ಲು ಪ್ರಿಯೆ !
ಸುಖ ಆಗಲಿ ದುಃಖ ಆಗಲಿ
ಒಟ್ಟು ಕೂಡಿ ಬಾಳುವೆವು ಎಂಬ
ವಚನ ನೀಡಿದನ್ನು ಮರೆತೆಯೆ ಪ್ರಿಯೆ
ಹೃದಯ ಹಗುರವಾಗುವುದು
ಮಾತನ್ನು ನನ್ನೊಟ್ಟಿಗೆ ಹಂಚು ಪ್ರಿಯೆ!
by ಹರೀಶ್ ಶೆಟ್ಟಿ, ಶಿರ್ವ
ಏಕೆ ನಗುವೆ ಪ್ರಿಯೆ
ನಿನ್ನ ಮುಖದಲ್ಲಿ ಕಾಣುವ
ವಿಷಾದ ಬೇರೆಯೇ ಕಥೆ
ಹೇಳುತ್ತಿದೆ ಪ್ರಿಯೆ !
ನಿನ್ನ ನೆರಳು ನಾನು ಎಂದು
ನಿನಗೆ ತಿಳಿದಿಲ್ಲವೇ ಪ್ರಿಯೆ
ಸಪ್ತಪದಿ ತುಳಿದು ನನ್ನ
ಜೀವನದಲ್ಲಿ ನೀ ಬಂದಿರುವೆ ಎಂದು
ಮರೆತು ಹೋದೆಯೇ ಪ್ರಿಯೆ!
ನಿನ್ನ ಈ ನಗುವಿನ ಹಿಂದೆ
ಅಡಗಿದ ರಹಸ್ಯವನ್ನು ಒಮ್ಮೆ
ಹೇಳು ಪ್ರಿಯೆ
ತುಂಬಿದ ಕಣ್ಣೀರನ್ನು ಒಮ್ಮೆ
ಹೊರ ಚೆಲ್ಲು ಪ್ರಿಯೆ !
ಸುಖ ಆಗಲಿ ದುಃಖ ಆಗಲಿ
ಒಟ್ಟು ಕೂಡಿ ಬಾಳುವೆವು ಎಂಬ
ವಚನ ನೀಡಿದನ್ನು ಮರೆತೆಯೆ ಪ್ರಿಯೆ
ಹೃದಯ ಹಗುರವಾಗುವುದು
ಮಾತನ್ನು ನನ್ನೊಟ್ಟಿಗೆ ಹಂಚು ಪ್ರಿಯೆ!
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment