Sunday, July 15, 2012

ಹುಲಿ ಮತ್ತು ಜಿಂಕೆ

ದಟ್ಟ ಕಾಡಿನಲ್ಲಿ ಆಹಾರಕ್ಕಾಗಿ
ಅಲೆಯುತ್ತಿತ್ತು ಒಂದು ಹುಲಿ
ಸುಂದರ ಜಿಂಕೆ ಒಂದು
ಕುಣಿಯುತ ಬಂತು ಅಲ್ಲಿ !

ಜಿಂಕೆಯನ್ನು ಕಂಡು ಹುಲಿಯ
ಬಾಯಲ್ಲಿ ನೀರು
ಹುಲಿಯನ್ನು ಕಂಡು ಜಿಂಕೆಗೆ
ಆಯಿತು ಭಯ ಜೋರು !

ಜಿಂಕೆಯ ಕಣ್ಣಲ್ಲಿ
ಭಯ ಭಾವ
ತಿಳಿಯಲು ಅಸಮರ್ಥ
ಹುಲಿಯ ಮನೋಭಾವ

ಹುಲಿ ಬಂತು ಜಿಂಕೆಯ ಬಳಿ
ಆಗುವುದೇ ಜಿಂಕೆಯ ಬಲಿ?
ಜಿಂಕೆ ಭಯದಿಂದ ತಂಪು
ಹುಲಿ ಹಸಿವಿಂದ ಕೆಂಪು

ಕ್ಷಣದಲ್ಲಿ ನಿರ್ಧಾರ
ಶುರುವಾಯಿತು ಓಟ
ಜಿಂಕೆಯ ಓಟ ಜೀವಕ್ಕಾಗಿ
ಹುಲಿಯ ಓಟ ಆಹಾರಕ್ಕಾಗಿ

ಕಡೆಗೆ ಆಯಿತು
ಜಿಂಕೆಯ ಗೆಲುವು ಹುಲಿಯ ಸೋಲು
ಅವಶ್ಯಕತೆಕ್ಕಿಂತ
ಉದ್ದೇಶ ಆಯಿತು ಮೇಲು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...