!!ಬಾ ಹಚ್ಚುವ ಬಣ್ಣವನ್ನು
ನೀನು ನನಗೆ
ನಾನು ನಿನಗೆ
ಎಲ್ಲ ಕಹಿಯನ್ನು ತೊರೆದು
ಹಚ್ಚುವ ಪ್ರೀತಿ ಪ್ರೇಮದ ಬಣ್ಣವನ್ನು !!
ಬಾ ಹಚ್ಚುವ ಬಣ್ಣವನ್ನು ....
!!ಬಾ ಮರೆತು ಬಿಡುವ ಇಂದು
ನಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳನ್ನು
ಬಾ ಈ ಬಣ್ಣದಿಂದ
ಮುಚ್ಚಿ ಬಿಡುವ ನಮ್ಮ ಅಹಂ, ಅಭಿಮಾನವನ್ನು
ಇಡುವ ಹೊಸ ಬಣ್ಣದ ಹೆಜ್ಜೆ
ಸಿಂಗಾರಿಸುವ ನಮ್ಮ ಹೊಸ ಬಾಳನ್ನು!!
ಬಾ ಹಚ್ಚುವ ಬಣ್ಣವನ್ನು.....
!!ಬಾ ದಹನ ಮಾಡುವ ಇಂದು
ನಮ್ಮಲ್ಲಿದ ಭೇದ ಭಾವಗಳನ್ನು
ಬಾ ರಂಗು ರಂಗಿನ ಈ ಬಣ್ಣದಿಂದ
ಮಧುರ ಮಾಡುವ ನಮ್ಮ ಸಂಬಂಧವನ್ನು
ನೋಡುವ ಹೊಸ ಬಣ್ಣ ಬಣ್ಣದ ಕನಸನ್ನು
ಜೀವನದಲಿ ಹಂಚುತಿರುವ ಪ್ರೀತಿಯನ್ನು !!
ಬಾ ಹಚ್ಚುವ ಬಣ್ಣವನ್ನು.....
by ಹರೀಶ್ ಶೆಟ್ಟಿ, ಶಿರ್ವ
ನೀನು ನನಗೆ
ನಾನು ನಿನಗೆ
ಎಲ್ಲ ಕಹಿಯನ್ನು ತೊರೆದು
ಹಚ್ಚುವ ಪ್ರೀತಿ ಪ್ರೇಮದ ಬಣ್ಣವನ್ನು !!
ಬಾ ಹಚ್ಚುವ ಬಣ್ಣವನ್ನು ....
!!ಬಾ ಮರೆತು ಬಿಡುವ ಇಂದು
ನಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳನ್ನು
ಬಾ ಈ ಬಣ್ಣದಿಂದ
ಮುಚ್ಚಿ ಬಿಡುವ ನಮ್ಮ ಅಹಂ, ಅಭಿಮಾನವನ್ನು
ಇಡುವ ಹೊಸ ಬಣ್ಣದ ಹೆಜ್ಜೆ
ಸಿಂಗಾರಿಸುವ ನಮ್ಮ ಹೊಸ ಬಾಳನ್ನು!!
ಬಾ ಹಚ್ಚುವ ಬಣ್ಣವನ್ನು.....
!!ಬಾ ದಹನ ಮಾಡುವ ಇಂದು
ನಮ್ಮಲ್ಲಿದ ಭೇದ ಭಾವಗಳನ್ನು
ಬಾ ರಂಗು ರಂಗಿನ ಈ ಬಣ್ಣದಿಂದ
ಮಧುರ ಮಾಡುವ ನಮ್ಮ ಸಂಬಂಧವನ್ನು
ನೋಡುವ ಹೊಸ ಬಣ್ಣ ಬಣ್ಣದ ಕನಸನ್ನು
ಜೀವನದಲಿ ಹಂಚುತಿರುವ ಪ್ರೀತಿಯನ್ನು !!
ಬಾ ಹಚ್ಚುವ ಬಣ್ಣವನ್ನು.....
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment