!!ಜೀವನ ನೀಡಿದವನೆ ಕೇಳು
ನಿನ್ನ ಜಗದಿಂದ ಸಾಕಾಗಿದೆ
ನಾನಿಲ್ಲಿ ಬದುಕಿದ್ದೂ ಸತ್ತಂತಾಗಿದೆ!!
ಜೀವನ ನೀಡಿದವನೆ ಕೇಳು....
!!ರಾತ್ರಿ ಸರಿಯುವುದಿಲ್ಲ
ಹಗಲು ಕಳೆಯುವುದಿಲ್ಲ
ಗಾಯ ಹೀಗೆ ಕೊಟ್ಟೆರುವೆ
ಅಂದರೆ ವಾಸಿ ಆಗುವುದಿಲ್ಲ
ಕಣ್ಣು ಬರಿದಾಗಿದೆ
ಹೃದಯ ನೋವಲ್ಲಿದೆ
ದುಃಖ ಏರುತ್ತಿದೆ
ಯಾರೋ ಜಾದೂ ಮಾಡಿದಂತಾಗಿದೆ !!
ಜೀವನ ನೀಡಿದವನೆ ಕೇಳು....
!!ದೋಷವಿಲ್ಲದೆ ನನ್ನಿಂದ
ನೀನು ಖುಷಿ ಕಸಿದುಕೊಂಡೆ
ಜೀವದಲ್ಲಿಟ್ಟೆ ಆದರೆ
ಜೀವನ ಕಸಿದುಕೊಂಡೆ
ಮಾಡಿದೆ ಹತ್ಯೆ ಹೃದಯದು
ಯಾವಾಗ ತನಕ ಸುಮ್ಮನಿರುವುದು,
ನೇರ ಯಾಕೆ ಹೇಳಬಾರದು
ನೀನು ನನ್ನ ಸುಖದಿಂದ ಅಸೂಯೆ ಪಟ್ಟಿರುವೆ!!
ಜೀವನ ನೀಡಿದವನೆ ಕೇಳು....
ಮೂಲ :ಶಕೀಲ್ ಬದಯೂನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ತಲತ್ ಮೆಹಮೂದ್
ಸಂಗೀತ : ಗುಲಾಮ್ ಮೊಹಮ್ಮದ್
ಚಿತ್ರ : ದಿಲ್ ಯೆ ನಾದಾನ್
Zi.Ndagii Dene Vaale Sun
Terii Duniyaa Se Dil Bhar Gayaa
Mai.N Yahaa.N Jiite Jii Mar Gayaa
Raat Katatii Nahii.N Din Guzarataa Nahii.N
Zakm Aisaa Diyaa Hai Ke Bharataa Nahii.N
Aa.Nkh Viiraan Hai, Dil Pareshaan Hai, Gam Kaa Saamaan Hai
Jaise Jaaduu Koi Kar Gayaa
Zi.Ndagii Dene Vaale Sun...
Bekataa Tuune Mujh Se Khushii Chhiin Lii
Zi.Ndaa Rakhaa Magar Zi.Ndagii Chhiin Lii
Kar Diyaa Dil Kaa Khuu.N, Chup Kahaa.N Tak Rahuu.N, Saaf Kyuu.N Naa Kahuu.N
Tuu Khushii Se Merii Jal Gayaa
Zi.Ndagii Dene Vaale Sun...
http://www.youtube.com/watch?v=AE0ViVMEJMg
No comments:
Post a Comment