Tuesday, March 26, 2013

ಅರ್ಧಾಂಗಿ

!!ತುಟಿಯಲಿ ನಗು 
ಮನಸ್ಸು ನಿರ್ಮಲ 
ಕಣ್ಣಲ್ಲಿ ನನಗಾಗಿ ಕನಸು 
ಇದೇ ಅವಳ ಭಂಗಿ 
ಜೊತೆಗಾತಿ, ನನ್ನ ಅರ್ಧಾಂಗಿ !!

!!ಪ್ರೇಮ ಅಪಾರ 
ಹೊತ್ತು ಕುಟುಂಬದ ಭಾರ
ಅವಳಿಂದ ಜೀವನ ನನ್ನ ಸೊಗಸು
ಅವಳಿಲ್ಲದೆ ನಾನು ಏಕಾಂಗಿ
ತ್ಯಾಗಮಯಿ, ನನ್ನ ಅರ್ಧಾಂಗಿ !!

!!ಸಹನಶೀಲೆ
ಗೃಹ ಕಾರ್ಯ ನಿಪುಣಿ
ಅವಳಿಂದಲೇ ಸಾಗುತ್ತಿದೆ ಜೀವನದ ದೋಣಿ
ಅವಳಿಂದ ನನ್ನ ಬದುಕು ಮಧುರ ಸಾರಂಗಿ
ಜೀವನ ಸಂಗಾತಿ, ನನ್ನ ಅರ್ಧಾಂಗಿ !!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...