Wednesday, March 13, 2013

ಸಂಗಾತಿ ಇಲ್ಲ ಯಾವುದೇ ಗಮ್ಯವಿಲ್ಲ

!!ಸಂಗಾತಿ ಇಲ್ಲ ಯಾವುದೇ ಗಮ್ಯವಿಲ್ಲ  
ದೀಪವಿಲ್ಲ ಯಾವುದೇ ಸಭೆ ಇಲ್ಲ 
ಹೃದಯ ಕೊಂಡೊಯ್ಯುತ್ತಿದೆ ನನಗೆ 
ಏಕಾಂಗಿ ಎಲ್ಲಿಗೆ !!

!!ಒಲುಮೆ ಸಿಗುವುದು ಎಲ್ಲಿಯೂ 
ಅಂತಹ ಭಾಗ್ಯ ಎಲ್ಲಿ 
ನಿಷ್ಕರುಣಿ ಭೂಮಿ 
ದೂರ ಇದ್ದಾನೆ ಆಕಾಶವೂ !!-೨ 
ಸಂಗಾತಿ ಇಲ್ಲ ಯಾವುದೇ ಗಮ್ಯವಿಲ್ಲ  ....

!!ಹಾದಿಗಳು ನಮ್ಮ ದೇಶದ
ಆದರೆ ಅಪರಿಚಿತ ಅನಿಸುತ್ತಿದೆ
ಯಾರಿಗೆ ಯಾರು 
ಹೇಳಲಿ 
ನಮ್ಮವರೆಂದು ಇಲ್ಲಿ!!-೨
ಸಂಗಾತಿ ಇಲ್ಲ ಯಾವುದೇ ಗಮ್ಯವಿಲ್ಲ  ...

!!ಕಲ್ಲಿನ ಪರಿಚಿತರು ಸಿಕ್ಕಿದರು
ಕಲ್ಲಿನ ದೇವರು ಸಿಕ್ಕಿದರು
ಗಾಜಿನ ಹೃದಯವನ್ನು ಇಟ್ಟುಕೊಂಡು 

ಹೋಗುವುದು ನಾನೆಲ್ಲಿಗೆ!!-೨
ಸಂಗಾತಿ ಇಲ್ಲ ಯಾವುದೇ ಗಮ್ಯವಿಲ್ಲ ...

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ :ಎಸ್.ಡೀ.ಬರ್ಮನ್
ಚಿತ್ರ : ಬೊಂಬಾಯಿ ಕಾ ಬಾಬು
साथी न कोई मंज़िल
दिया है न कोई महफ़िल
चला मुझे लेके ऐ दिल
अकेला कहाँ

हमदम कोई मिले कहीं
ऐसे नसीब ही नहीं
बेदर्द है ज़मीं, दूर आसमाँ
साथी न कोई मंजिल...

गलियां हैं अपने देस की
फिर भी हैं जैसे अजनबी
किसको कहे कोई, अपना यहाँ
साथी न कोई मंजिल...

पत्थर के आशना मिले
पत्थर के देवता मिले
शीशे का दिल लिये, जाऊँ कहाँ
साथी न कोई मंजिल...

http://www.youtube.com/watch?v=0GrqxZCSEH0

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...