Tuesday, March 19, 2013

ಗಣನೆ

ಇವನು ಅವರ ಗಣನೆಯಲ್ಲಿ ಇಲ್ಲ 
ಆದರೆ ಅವರಿಗಾಗಿ ಇವನು 
ಸುಖ ನೆಮ್ಮದಿ ಸಂತೋಷ 
ಕೂಡಿಸುತ ಇರುತ್ತಾನೆ!

ಅವರು ತನ್ನ ಜೀವನದಿಂದ 
ಇವನನ್ನು ಬಿಟ್ಟಿದ್ದಾರೆ ಕಳೆದು 
ಇವನ ತಪ್ಪನ್ನು ಗುಣಿಸಿ ಗುಣಿಸಿ 
ಇವನ ತಪ್ಪಿನ ಮೊತ್ತ ಏರಿಸಿದ್ದಾರೆ!

ಇವನೆಂದರೆ ಅವರಿಗೆ
ಒಂದು ಸಣ್ಣ ಸಂಖ್ಯೆ
ಬಹುಶಃ ಶೂನ್ಯ ಇರಬೇಕು
ಬೆಲೆ ಇಲ್ಲದವ ಎಂದು ಭಾವಿಸಿದ್ದಾರೆ!

ಇವನ ಗುಣಗಳನ್ನು
ಇವನ ತಪ್ಪಿನಿಂದ ಭಾಗಿಸಿ ಭಾಗಿಸಿ
ಇಂದು ಅದರ ಮೊತ್ತಕ್ಕೆ ಮೂಲ್ಯ ಇಲ್ಲದಾಗಿದೆ
ಇವನ ತಪ್ಪಿನ ಗಣನೆ ಕೇವಲ ಅವರ ಲೆಕ್ಕದಲ್ಲಿದೆ!

ಇಂದು ಇವನು ಶೂನ್ಯ
ಆದರೆ ಬೇಸರ ಇಲ್ಲ ಇವನಿಗೆ
ಜೀವನದ ಲೆಕ್ಕಚಾರದಲಿ
ಶೂನ್ಯವಾಗಿರುವುದೇ ಇಷ್ಟ ಇವನಿಗೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...