Wednesday, March 20, 2013

ಅಮೃತ ಪ್ರೀತಮ್ ಅವರ ಒಂದು ಸಂಸ್ಮರಣೆ

ಅಮೃತ ಪ್ರೀತಮ್ ಅವರ ಒಂದು ಸಂಸ್ಮರಣೆ, ಕನ್ನಡದಲ್ಲಿ ನಿಮಗಾಗಿ ಅನುವಾದಿಸಿದೆ.
__________________________________________________

ಅವಾಗ ನನ್ನ ವಯಸ್ಸು ೧೧ ಇರಬೇಕು . ಇದ್ದಕ್ಕಿದಂತೆ ನನ್ನ ಅಮ್ಮನ ಅರೋಗ್ಯ ಕೆಟ್ಟಿತು. ಅರೋಗ್ಯ ಸರಿ ಇಲ್ಲದೆ ಒಂದು ವಾರ ಆಗಿರಬೇಕು, ಆಗ ನಾನು ನೋಡಿದೆ ಅಮ್ಮನ ಹಾಸಿಗೆಯ ಬದಿಯಲ್ಲಿ ಕುಳಿತವರೆಲ್ಲ ಭಯಭೀತರಾಗಿದ್ದರು.

"ನನ್ನ ಬಿನ್ನ (ಅಮೃತ ಪ್ರೀತಂ ಅವರ ಮನೆ ಹೆಸರು ) ಎಲ್ಲಿ ?"ಎಂದು ನನ್ನ ಅಮ್ಮ ಕೇಳಿದರಂತೆ , ನನ್ನ ಅಮ್ಮನ ಗೆಳತಿ ನನ್ನ ಬಳಿ ಬಂದು ನನ್ನ ಕೈ ಹಿಡಿದು ಅಮ್ಮನ ಬಳಿ ತಂದಳು, ಆದರೆ ಅಮ್ಮನವರು ಎಲ್ಲಿ ಪ್ರಜ್ನೆಯಲ್ಲಿದ್ದರು.

ನನ್ನ ಅಮ್ಮನ ಗೆಳತಿ ನನಗೆ " ನೀನು ದೇವರಿಂದ ಅಮ್ಮಗೊಸ್ಕರ ಪ್ರಾರ್ಥಿಸು, ಯಾರಿಗೊತ್ತು ಅವರ ಮನಸ್ಸಲ್ಲಿ ದಯೆ ಹುಟ್ಟಿದರೆ ,ದೇವರು ಮಕ್ಕಳ ಮಾತನ್ನು ಕೇಳುತ್ತಾನೆ, ತಪ್ಪುವುದಿಲ್ಲ"ಎಂದು ಹೇಳಿದಳು .

ನಾನು ಹಾಸಿಗೆಯ ಬಳಿ ನಿಂತು ಕಲ್ಲಿನಂತೆ ಆದೆ. ನಾನು ನನ್ನ ಸಣ್ಣ ವಯಸ್ಸಿನಿಂದಲೇ ದೇವರನ್ನು ಪ್ರಾರ್ಥಿಸುತ್ತಿದ್ದೆ ಹಾಗು ಈಗ ಒಂದು ಬೇಡಿಕೆ ಸಹ ಇತ್ತು, ನಾನು ಎಷ್ಟೋ ಗಂಟೆ ಕಣ್ಣು ಮುಚ್ಚಿ ದೇವರ ಧ್ಯಾನದಲ್ಲಿ ಕುಳಿತೆ ಹಾಗು ದೇವರಿಗೆ ಹೇಳಿದೆ " ದೇವರೇ ನನ್ನ ಅಮ್ಮನನ್ನು ಕೊಲ್ಲಬೇಡ ".

ಅಮ್ಮನ ಹಾಸಿಗೆಯಿಂದ ಈಗ ಅವರು ವೇದನೆಯಿಂದ ನರಳುವ ಶಬ್ದ ಬರುತ್ತಿರಲಿಲ್ಲ. ಆದರೆ ಅವರ ಬದಿಯಲ್ಲಿದ್ದವರೆಲ್ಲ ಗಾಬರಿಗೊಂಡಿದ್ದರು. ಇವರು ಬೇಕಂತೆ ಭಯ ಪಡುತ್ತಿದ್ದಾರೆ, ಈಗ ಅಮ್ಮನವರಿಗೆ ವೇದನೆ ಇಲ್ಲ , ನಾನು ದೇವರಿಗೆ ಹೇಳಿದ್ದೇನೆ ಹಾಗು " ಅವರು ಮಕ್ಕಳ ಮಾತು ತಪ್ಪುವುದಿಲ್ಲ".
ಆಗ ಅಮ್ಮನವರು ಮೌನವಾಗಿದ್ದರೂ ಆದರೆ ಅಲ್ಲಿ ಇತರರು ಜೋರಲ್ಲಿ ಅಳುವ ಶಬ್ದ ಕೇಳಿತು , ನನ್ನ ಅಮ್ಮ ಸತ್ತಿದರು.

ಆ ದಿನದಿಂದ ನನ್ನ ಮನಸ್ಸಲ್ಲಿ ರೋಷ ನಿರ್ಮಾಣವಾಯಿತು "ದೇವರು ಯಾರದ್ದು ಕೇಳುವುದಿಲ್ಲ , ಮಕ್ಕಳದ್ದು  ಸಹ ".

ಆ ದಿನದ ನಂತರ ಎಷ್ಟೋ ವರ್ಷದಿಂದ ದೇವರನ್ನು ಪ್ರಾರ್ಥಿಸುವ ನನ್ನ ನಿಯಮವನ್ನು ಬಿಟ್ಟು ಬಿಟ್ಟೆ.

ತಂದೆಯ ಆಜ್ಞೆ ತುಂಬಾ ಕಟೋರವಾಗಿತ್ತು,ಆದರೆ ನನ್ನ ಹಠದ ಮುಂದೆ ಅವರ ನಡೆಯಲಿಲ್ಲ .

"ದೇವರಿಲ್ಲ "

"ಹೀಗೆ ಹೇಳಬಾರದು "

"ಯಾಕೆ ?"

"ಅವರಿಗೆ ಕೋಪ ಬರಬಹುದು "

" ಬರಲಿ , ನನಗೆ ಗೊತ್ತುಂಟು ದೇವರಿಲ್ಲ ಎಂದು "

"ನಿನಗೆ ಹೇಗೆ ಗೊತ್ತು? "

"ಅವನಿದ್ದರೆ , ನನ್ನ ಕೇಳುವುದಿಲ್ಲವೇ "
"ನೀನು ಅವರಿಂದ ಏನು ಕೇಳಿದೆ? "

"ನಾನು ಅವರಿಗೆ ಹೇಳಿದೆ , ನನ್ನ ಅಮ್ಮನನ್ನು ಕೊಲ್ಲಬೇಡ ಎಂದು "
"ನೀನು ಎಂದೂ ಅವರನ್ನು ನೋಡಿದಿಯಾ  , ಅವರು ಕಾಣುವುದಿಲ್ಲ ?"

"ಆದರೆ ಅವನಿಗೆ ಕೇಳುವುದು ಸಹ ಇಲ್ಲ "........

ಅನುವಾದ : ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...