!!ಹೋಗ ಬೇಡ ಒಡೆಯ
ಬಿಟ್ಟು ನನ್ನ ಕೈಯ
ಆಣೆ ನಿನ್ನ ನಾನು ಅತ್ತು ಬಿಡುವೆ
ಅತ್ತು ಬಿಡುವೆ
ಬೇಡುತ್ತಿದೆ ಮಾಂಗಲ್ಯ ನನ್ನ
ಒಂದು ವೇಳೆ ನೀನಿಲ್ಲದಿದ್ದರೆ ನನ್ನದೇನು
ನನ್ನದೇನು !!-೨
!!ಈ ಹರಡಿದ ಕೇಶ
ಈ ಅರಳಿದ ಹೂಮಾಲೆ
ಈ ಸುಗಂಧಿತ ಸೆರಗು
ಈ ಮನಸ್ಸಿನ ಮಧಿರೆ -೨
ಇದೆಲ್ಲ ನಿನಗಾಗಿಯೇ ಪ್ರೀಯತಮ
ನಾನಿಂದು ನಿನ್ನನ್ನು ಹೋಗಲು ಬಿಡಲಾರೆ
ಹೋಗಲು ಬಿಡಲಾರೆ !!
ಹೋಗ ಬೇಡ ಒಡೆಯ...
!!ನಾನಿನ್ನ ದಾಸಿ
ಜನ್ಮದಿಂದ ದಾಹದಲಿ
ನೀನೆ ನನ್ನ ಸಿಂಗಾರ ಪ್ರೀಯತಮ-೨
ನಿನ್ನ ಹಾದಿಯ ಧೂಳನ್ನು ನಾನು
ನನ್ನ ಹಣೆಯಲಿ ಸದಾ ತುಂಬುವೆ
ಸದಾ ತುಂಬುವೆ !!
ಹೋಗ ಬೇಡ ಒಡೆಯ...
!!ನನ್ನಿಂದ ಕಣ್ಣು ತಪ್ಪಿಸಿಕೊಳ್ಳುವೆಯೆಂದರೆ
ನನ್ನದು ಇಷ್ಟು ಮನವಿ ಕೇಳು -೨
ನಿನ್ನ ಚರಣದ ದಾಸಿ ನಾನು
ಇನ್ನು ಇಲ್ಲೇ ಜೀವಿಸುವೆ ಇಲ್ಲೇ ಸಾಯುವೆ
ಇಲ್ಲೇ ಸಾಯುವೆ !!
ಹೋಗ ಬೇಡ ಒಡೆಯ...
ಮೂಲ : ಶಕೀಲ್ ಬದಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಗೀತ ದತ್
ಸಂಗೀತ : ಹೇಮಂತ್ ಕುಮಾರ್
ಚಿತ್ರ : ಸಹಬ್ ಬಿವಿ ಔರ್ ಗುಲಾಮ್
N Jaao Saiyyaa, Chhudaa Ke Baiyyaa
kasam Tumhaaree Main Ro Padoongee
machal Rahaa Hain Suhaag Meraa
jo Tum Naa Honge, To Kyaa Karungee
ye Bikharee Julfe, Ye Khilataa Gajaraa
ye Mahakee Chunaree, Ye Man Kee Madeeraa
ye Sab Tumhaare Liye Hain Pareetam
mai Aaj Tum Ko Naa Jaane Doongee, Jaane Naa Doongee
mai Tumharee Daasee, Janam Kee Pyaasee
tum Hee Ho Meraa Singaar Pareetam
tumhaare Rasate Kee Dhool Le Kar
mai Maang Apanee Sadaa Bharungee, Sadaa Bharungee
jo Muz Se Aakhiyaan Churaa Rahe Ho
to Meree Itanee Arja Bhee Sun Lo
tumhaare Charanon Mein Aa Gayee Hoo
yahee Jioongee, Yahee Marungee, Yahee Marungee
http://www.youtube.com/watch?v=OOVfz1GX63Y
No comments:
Post a Comment