Wednesday, March 13, 2013

ಸಣ್ಣ ಕಥೆಗಳು


ಕೊಲೆ
******
ಅವನ ಕಾರ್
ಅಡಿಯಲಿ ಸಿಕ್ಕಿ
ನಾಯಿಯ ಸಾವು
ರಕ್ತರಂಜಿತ ನಾಯಿ
ಕೊಲೆಗಾರ ಕಾರ್ ಚಾಲಕ ಪರಾರಿ
_____
ಕುದುರೆ
******
ಆ ಕುದುರೆ
ಕೃಶವಾಗಿತ್ತು
ಆದರೆ
ಜೂಜುಗಾರರ ಕೃಪೆಯಿಂದ
ಇಂದಿನ ಓಟದಲಿ
ಆ ಕುದುರೆ
ಪ್ರಥಮ ವಿಜೇತೆ
_____
ವಿಷ
*****
ಸಾಲಗಾರರಿಂದ
ಮುಕ್ತಿ ಪಡೆಯಲು
ಅವನು
ಆತ್ಮಹತ್ಯೆ ಮಾಡಲು
ವಿಷ ತಂದ
ಆಗ ಲಾಟರಿಯಲ್ಲಿ
ಅವನಿಗೆ ಒಂದು ಕೋಟಿ
ಬಹುಮಾನ ಬಂದ ಸುದ್ದಿ ಬಂತು.
ಕೇಳಿ ಹೃದಯಾಘಾತದಿಂದ ಅವನು ಸತ್ತ .
ತಂದ ವಿಷ ಅಲ್ಲಿಯೇ ಉಳಿಯಿತು
________
ಮಜನೂ
****
ಅವನಿಗೆ
ಅವಳಿಂದ ಪ್ರೀತಿ
ಎಲ್ಲರೂ ಅವನನ್ನು
ಮಜನೂ ಎಂದು ಕರೆಯುತ್ತಿದ್ದರು.
ಅವಳ ಅಣ್ಣಂದಿರಿಗೆ ಸುದ್ದಿ ಗೊತ್ತಾಗಿ
ಅವರು ಬಂದು ಅವನಿಗೆ ಸರಿ ಒದೆದರು.
ಬಟ್ಟೆಯೆಲ್ಲ ಹರಿದು ಗಾಯಗೊಂಡು
ಈಗ ಅವನು ನಿಜ ಮಜನೂ.
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...