ಗೆಳತಿ
ನೀನು ಸತ್ಯವಾದಿ ಆದರೂ
ನಿನ್ನ ಮಾತನ್ನು ಎಲ್ಲರೂ
ಒಪ್ಪಲೆ ಬೇಕೆಂದೆನಿಲ್ಲ
ನಿನ್ನಷ್ಟಕ್ಕೆ ನಿನಗೆ ಇರಲಾಗದೆಂದೂ
ನನಗೆ ಗೊತ್ತು
ಆದರೆ ಸ್ವಲ್ಪ ತಾಳ್ಮೆ ಇಟ್ಟುಕೋ
ಎಲ್ಲರೂ ನಿನ್ನ ಹಾಗೆ
ಸ್ವಚ್ಚ ಮನಸ್ಸಿನವರಿಲ್ಲ ಇಲ್ಲಿ ,
ಈ ಜಗತ್ತಲ್ಲಿ ವಿವಿಧ ತರಹದ ಮನುಷ್ಯರಿದ್ದಾರೆ
ಇಂದಿನ ಜನರಿಗೆ ಸುಳ್ಳ ಲೋಕ
ಬಹು ಬೇಗ ಸೆಳೆಯುತ್ತದೆ
ಸತ್ಯ ಹೇಳುವವರನ್ನು ಯಾವುದೇ ಮೂಲೆಗೆ
ಸೇರಿಸುವುದೆಂದರೆ ಅವರಿಗೆ ಪರಮಾನಂದ
ಹೊಗಳು ಬಟ್ಟರಿಗೆ ಹೊಟ್ಟೆ ತುಂಬಾ ಭೋಜನ ಇಲ್ಲಿ
ಟೀಕಿಸುವವರಿಗೆ ಸನ್ಮಾನ ಎಲ್ಲಿದೆ ಇಲ್ಲಿ
ಆದರೂ ಒಂದು ವಿಷಯ
ನಿನಗ್ಯಾಕೆ ಅನ್ಯರ ವಿಷಯ ?
ಅವರು ಏನೂ ಮಾಡಿದರೂ ನಿನಗೇನೂ?
ಆದರೆ ನಿನ್ನ ಸ್ವಭಾವ ತಿಳಿದವ ನಾನು
ಯಾಕೆ ಇದೆಲ್ಲ ನಿನಗೆ ಹೇಳುತ್ತಿದೇನೆ
ಇರಲಿ ಬಿಡು
ಸ್ವಭಾವ ಬದಲಾಯಿಸೆಂದು
ನಿನಗೆ ಹೇಳುವಷ್ಟು ಮಟ್ಟಕ್ಕೆ ನಾನಿಲ್ಲ
ಆದರೆ ಎಲ್ಲರು ನಿನ್ನಂತೆ ಜಾಣರಲ್ಲ
ಹಾಗು ಎಲ್ಲರು ಇಲ್ಲಿ ಕೋಣರಲ್ಲ
ಇಷ್ಟೊಂದು ನಿನಗೆ ಹೇಳುವೆ
by ಹರೀಶ್ ಶೆಟ್ಟಿ, ಶಿರ್ವ
ನೀನು ಸತ್ಯವಾದಿ ಆದರೂ
ನಿನ್ನ ಮಾತನ್ನು ಎಲ್ಲರೂ
ಒಪ್ಪಲೆ ಬೇಕೆಂದೆನಿಲ್ಲ
ನಿನ್ನಷ್ಟಕ್ಕೆ ನಿನಗೆ ಇರಲಾಗದೆಂದೂ
ನನಗೆ ಗೊತ್ತು
ಆದರೆ ಸ್ವಲ್ಪ ತಾಳ್ಮೆ ಇಟ್ಟುಕೋ
ಎಲ್ಲರೂ ನಿನ್ನ ಹಾಗೆ
ಸ್ವಚ್ಚ ಮನಸ್ಸಿನವರಿಲ್ಲ ಇಲ್ಲಿ ,
ಈ ಜಗತ್ತಲ್ಲಿ ವಿವಿಧ ತರಹದ ಮನುಷ್ಯರಿದ್ದಾರೆ
ಇಂದಿನ ಜನರಿಗೆ ಸುಳ್ಳ ಲೋಕ
ಬಹು ಬೇಗ ಸೆಳೆಯುತ್ತದೆ
ಸತ್ಯ ಹೇಳುವವರನ್ನು ಯಾವುದೇ ಮೂಲೆಗೆ
ಸೇರಿಸುವುದೆಂದರೆ ಅವರಿಗೆ ಪರಮಾನಂದ
ಹೊಗಳು ಬಟ್ಟರಿಗೆ ಹೊಟ್ಟೆ ತುಂಬಾ ಭೋಜನ ಇಲ್ಲಿ
ಟೀಕಿಸುವವರಿಗೆ ಸನ್ಮಾನ ಎಲ್ಲಿದೆ ಇಲ್ಲಿ
ಆದರೂ ಒಂದು ವಿಷಯ
ನಿನಗ್ಯಾಕೆ ಅನ್ಯರ ವಿಷಯ ?
ಅವರು ಏನೂ ಮಾಡಿದರೂ ನಿನಗೇನೂ?
ಆದರೆ ನಿನ್ನ ಸ್ವಭಾವ ತಿಳಿದವ ನಾನು
ಯಾಕೆ ಇದೆಲ್ಲ ನಿನಗೆ ಹೇಳುತ್ತಿದೇನೆ
ಇರಲಿ ಬಿಡು
ಸ್ವಭಾವ ಬದಲಾಯಿಸೆಂದು
ನಿನಗೆ ಹೇಳುವಷ್ಟು ಮಟ್ಟಕ್ಕೆ ನಾನಿಲ್ಲ
ಆದರೆ ಎಲ್ಲರು ನಿನ್ನಂತೆ ಜಾಣರಲ್ಲ
ಹಾಗು ಎಲ್ಲರು ಇಲ್ಲಿ ಕೋಣರಲ್ಲ
ಇಷ್ಟೊಂದು ನಿನಗೆ ಹೇಳುವೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment