Sunday, March 10, 2013

ತೆರಳುವವರೇ ಸ್ವಲ್ಪ ತಿರುಗಿ ನೋಡಿ ನನಗೆ


!!ತೆರಳುವವರೇ ಸ್ವಲ್ಪ ತಿರುಗಿ ನೋಡಿ ನನಗೆ
ಒಬ್ಬ ಮನುಷ್ಯ ನಾನು ನಿಮ್ಮ ಹಾಗೆಯೇ  -೨
ಎಲ್ಲರನ್ನೂ ರಚಿಸಿದವ
ತನ್ನದೇ ರೂಪದಿಂದ
ಅವನ ಗುರುತು ನಾನು ನಿಮ್ಮ ಹಾಗೆಯೇ !!
ತೆರಳುವವರೇ ಸ್ವಲ್ಪ...

!!ಈ ಅನನ್ಯ ಜಗತ್ತಿನ ಅದೃಷ್ಟ ನಾನಾಗಿದ್ದೇನೆ-೨
ಸೃಷ್ಟಿಕರ್ತನ ಕೈಯ ಚಿತ್ರ ನಾನಾಗಿದ್ದೇನೆ
ಒಂದು ಚಿತ್ರ ನಾನಾಗಿದ್ದೇನೆ
ಈ ಪ್ರಪಂಚಕ್ಕಾಗಿ
ಭೂಮಾತೆಕ್ಕಾಗಿ
ಶಿವನ ಅನುಗ್ರಹ
ನಾನು ನಿಮ್ಮ ಹಾಗೆ !!
ತೆರಳುವವರೇ ಸ್ವಲ್ಪ...

!!ಮನಸ್ಸಿನ ಒಳಗೆ ಅಡಗಿಸಿದ್ದೇನೆ ಮಿಲನದ ಆಸೆಯನ್ನ-೨
ಸ್ವಂತ ಸೂರ್ಯನಿಂದ ಒಂದು ಅಗಲಿದ ಕಿರಣ
ಒಂದು ಅಗಲಿದ ಕಿರಣ
ತಿರುಗುವೆ ಅಲೆಯಾರಿಯಂತೆ
ನಾನು ಇಲ್ಲಿಂದ ಅಲ್ಲಿಗೆ
ಹಾಗು ನೋವಿನಲ್ಲಿದ್ದೇನೆ
ನಾನು ನಿಮ್ಮ ಹಾಗೆ!!
ತೆರಳುವವರೇ ಸ್ವಲ್ಪ...

!!ನನ್ನಲ್ಲಿಗೆ ಬಂದುಬಿಡಿ 
ಬಿಡಿ ಎಲ್ಲ ಗರ್ವ ನಿಮ್ಮ-೨
ಯಾವ ದುಃಖ ನನ್ನ
ಅದೇ ವೇದನೆ ನಿಮ್ಮ
ಅದೇ ವೇದನೆ ನಿಮ್ಮ
ನೋಡುತ್ತಿದ್ದೇನೆ ನಿಮ್ಮನ್ನು
ತಿಳಿದ್ದಿದ್ದೇನೆ ನಿಮ್ಮನ್ನು
ಆದರೆ ಅಜ್ಞಾತನಾಗಿದ್ದೇನೆ
ನಾನು ನಿಮ್ಮ ಹಾಗೆ!!
ತೆರುವವರೇ ಸ್ವಲ್ಪ....

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆಲಾಲ್
ಚಿತ್ರ : ದೋಸ್ತಿ
(jaane vaalon zara, mud ke dekho mujhe
ek insaan hun main tumhaari tarah) -2
jisane sab ko racha, apane hi roop se
us ki pahachaan hun main tumhaari tarah
jaane vaalon zara......

is anokhe jagat ki main taqadir hun -2
main vidhaata ke haathon ki tasavir hun
ek tasavir hun
is jahaan ke liye, dharati maan ke liye
shiv ka varadaan hun, main tumhaari tarah
jaane vaalon zara......

man ke andar chhipaae milan ki lagan -2
apane suraj se hun ek bichhadi kiran
ek bichhadi kiran
phir raha hun bhatakata, main yahaan se vahaan
aur pareshaan hun, main tumhaari tarah
jaane vaalon zara......

mere paas aao chhodo yah saara bharam -2
jo mera dukh vahi hai tumhaara bhi gham
hai tumhaara bhi gham
dekhata hun tumhe, jaanata hun tumhe
laakh anjaan hun, main tumhaari tarah
jaane vaalon zara......
http://www.youtube.com/watch?v=zrRz4JxGGSM

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...