Monday, March 11, 2013

ಪಯಣಿಗ ಮನಸ್ಸೇ ದುಃಖದ ಚಿಂತೆ ನಿನಗೆ ಯಾಕೆ ಕಾಡುತ್ತಿದೆ


!!ಪಯಣಿಗ ಮನಸ್ಸೇ ದುಃಖದ ಚಿಂತೆ ನಿನಗೆ ಯಾಕೆ ಕಾಡುತ್ತಿದೆ
ದುಃಖ ನಮ್ಮ ಸಂಗಾತಿಯಾಗಿದೆ-೨
ಸುಖ ಒಂದು ನೆರಳು ಕ್ಷಣಿಕ
ಬರುತ್ತದೆ ಹೋಗುತ್ತದೆ
ದುಃಖ ನಮ್ಮ ಸಂಗಾತಿಯಾಗಿದೆ!!

!!ದೂರವಿದೆ ಗಮ್ಯ ದೂರವಿರಲಿ
ಪ್ರೀತಿ ನಮ್ಮ ಏನು ಕಡಿಮೆಯೇ?
ಕಾಲಲ್ಲಿ ಮುಳ್ಳು ಸಾವಿರವಿರಲಿ
ಆದರೆ ಈ ಆಸರೆ ಏನು ಕಡಿಮೆಯೇ?
ಸಹಯಾತ್ರಿಯಾಗಿ ನಿನ್ನವರ ಜೊತೆ ಇದೆ -೨ !!
ಸುಖ ಒಂದು ನೆರಳು ಕ್ಷಣಿಕ
ಬರುತ್ತದೆ ಹೋಗುತ್ತದೆ
ದುಃಖ ನಮ್ಮ ಸಂಗಾತಿಯಾಗಿದೆ

!!ದುಃಖದಲ್ಲಿಯೇ ಬೆಳಗುವುದು
ಪಥದ ದೀಪ ಕಣ್ಣಲ್ಲಿ
ಇಷ್ಟು ದೊಡ್ಡ ಜಗತ್ತಿನ
ದೀರ್ಘ ಒಂಟಿ ಹಾದಿಯಲಿ
ಸಹಯಾತ್ರಿಯಾಗಿ ನಿನ್ನವರ ಜೊತೆ ಇದೆ-೨  !!
ಸುಖ ಒಂದು ನೆರಳು ಕ್ಷಣಿಕ
ಬರುತ್ತದೆ ಹೋಗುತ್ತದೆ
ದುಃಖ ನಮ್ಮ ಸಂಗಾತಿಯಾಗಿದೆ

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆಲಾಲ್
ಚಿತ್ರ : ದೋಸ್ತಿ

राही मनवा दुख की चिन्ता क्यों सताती है
दुख तो अपना साथी है
सुख है इक छाँव ढलती
आती है जाती है
दुख तो अपना साथी है

दूर है मंजिल दूर सही
प्यार हमारा क्या कम है
पग में काँटे लाख सही
पर ये सहारा क्या कम है
हमराह तेरे कोई अपना तो है
सुख है इक छाँव ढलती
आती है जाती है
दुख तो अपना साथी है

दुख हो कोई तब जलते हैं
पथ के दीप निगाहों में
इतनी बड़ी इस दुनिया की
लम्बी अकेली राहों में
हमराह तेरे कोई अपना तो है
सुख है इक छाँव ढलती
आती है जाती है
दुख तो अपना साथी है
http://www.youtube.com/watch?v=0v-ZDz3tiiQ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...