Monday, March 25, 2013

ನೋಡಿದೆ ಜಗದ ಮೋಹಗಳನ್ನೆಲ್ಲ


!!ನೋಡಿದೆ ಜಗದ ಮೋಹಗಳನ್ನೆಲ್ಲ
ದೂರವಾದರು
ದೂರವಾದರು ಒಂದೊಂದಾಗಿ ಎಲ್ಲ!!

!!ಏನು ಪಡೆದು ಸಿಗುವುದು
ಈ ಜಗತ್ತಿಂದ,
ಕಣ್ಣೀರಲ್ಲದೆ ಬೇರೇನೂ ಬಳಿಯಿಲ್ಲ
ಅದೆಷ್ಟೋ ಹೂಗಳಿತ್ತು ಬಳಿಯಲ್ಲಿ
ಆದರೆ ಈಗ ಮುಳ್ಳುಗಳ ಆಸೆಯೂ ಇಲ್ಲ
ಸ್ವಾರ್ಥದ ಜಗವೆಲ್ಲ !!
ದೂರವಾದರು
ದೂರವಾದರು ಒಂದೊಂದಾಗಿ ಎಲ್ಲ

!!ಸಮಯ ಸುಗಮವಾಗಿದೆ
ಬಯಕೆ ಯೌವನದಲ್ಲಿದೆ
ನಾಳೆಯ ಯೋಚನೆ ಮಾಡಲೆಂದು
ಇಷ್ಟು ಅವಕಾಶ ಎಲ್ಲಿದೆ !!

!!ಹೀಗೆಯೇ ಈ ಪ್ರಯಾಣ ಸಾಗಲಿ
ಬಣ್ಣ ಬಿರುಸಾಗಲಿ
ರೂಪ ಪ್ರದರ್ಶಿಸಲಿ
ಶರಾಬು ಗ್ಲಾಸು ಬದಲಾಗುತ್ತಿರಲಿ !!

!!ರಾತ್ರಿ ತನಕ ಅತಿಥಿ
ಈ ಮೋಜುಗಳೆಲ್ಲ
ರಾತ್ರಿ ಕಳೆದ ನಂತರ
ಈ ಖುಷಿ ಎಲ್ಲಿ
ಕ್ಷಣದ ಖುಷಿ ಈ ಎಲ್ಲ
ಏರ ತೊಡಗಿತು ತಳಮಳ
ಏರ ತೊಡಗಿತು ತಳಮಳ!!
ನೋಡಿದೆ ಜಗದ ಮೋಹಗಳನ್ನೆಲ್ಲ
ದೂರವಾದರು
ದೂರವಾದರು ಒಂದೊಂದಾಗಿ ಎಲ್ಲ

!!ಹಾರು ಹಾರು ದಾಹದಲ್ಲಿದ್ದ ಭ್ರಮರ
ರಸ ಸಿಗಲಿಕ್ಕಿಲ್ಲ ಕಾರಲ್ಲಿ
ಕಾಗದದ ಹೂವು ಎಲ್ಲಿ ಅರಳುವುದೋ
ಕುಳಿತುಕೊಳ್ಳಬೇಡ ಅಂಥ ಹೂದೋಟದಲಿ
ಮುದ್ದು ಇಚ್ಛೆ ಮರಳಲ್ಲಿ
ನಿರೀಕ್ಷೆಯ ದೋಣಿ ಹಾಯಿಸುತ್ತದೆ
ಒಂದು ಕೈಯಿಂದ ನೀಡುತ್ತದೆ ಪ್ರಪಂಚ
ನೂರು ಕೈಯಿಂದ ಕಸಿದು ಕೊಳ್ಳುತ್ತದೆ
ಸತತ ನಡೆಯುತ್ತಿದೆ ಈ ಆಟಗಳೆಲ್ಲ !!
ದೂರವಾದರು
ದೂರವಾದರು ಒಂದೊಂದಾಗಿ ಎಲ್ಲ

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಎಸ್ .ಡೀ.ಬರ್ಮನ್
ಚಿತ್ರ :ಕಾಗಜ್ ಕೆ ಫೂಲ್
are dekhi zamaane ki yaari
bichhade sabhee, bichhade sabhi baari baari
kya le ke milen ab duniya se, aansu ke siva kuch paas nahi
ya phul hi phul the daaman men, ya kaanton ki bhi aas nahi
matalab ki duniya hai saari
bichhade sabhee, bichhade sabhi baari baari

vaqt hai maharabaan, aarazu hai javaan
fikr kal ki karen, itani fursat kahaan

daur ye chalata rahe rang uchhalata rahe
roop machalata rahe, jaam badalata rahe

raat bhar mahamaan hain bahaaren yahaan
raat gar dhal gayi phir ye khushiyaan kahaan
pal bhar ki khushiyaan hain saari
badhane lagi beqaraari badhane lagi beqaraari
are dekhi zamaane ki yaari
bichhade sabhee, bichhade sabhi baari baari

ud ja ud ja pyaase bhanvare, ras na milega kaaron mein
kaagaz ke phul jahaan khilate hain, baith na un gulazaaro mein
naadan tamanna reti men, ummid ki kashti kheti hai
ik haath se deti hai duniyaa, sau haathon se leti hai
ye khel hai kab se jaari
bichhade sabhee, bichhade sabhi baari baari

www.youtube.com/watch?v=bel9oKzrR2I

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...