Saturday, March 16, 2013

ಚಂದ್ರ ನೀನು ನನ್ನ ಸೂರ್ಯ ನೀನು


!!ಚಂದ್ರ ನೀನು ನನ್ನ ಸೂರ್ಯ ನೀನು
ಓ ನನ್ನ ಹೃದಯದ ತಾರೆ ನೀನು-೩
ಬದುಕುವೆ ನಾನು ಕೇವಲ ನಿನ್ನನ್ನು ನೋಡಿ
ಈ ತುಂಡು ಹೃದಯದ ಆಸರೆ ನೀನು !!

!!ನೀ ಆಡುವೆ ಆಟ ಹಲವು
ನನ್ನ ಆಟಿಕೆ ನೀನು-೨
ನಿನ್ನಿಂದ ನನಗೆ ನಿರೀಕ್ಷೆ ಕೆಲವು
ಆ ಸುಂದರ ಕನಸು ನೀನು
ಪುಟ್ಟ ನೀನು ಎಷ್ಟು ಸುಂದರವಾಗಿರುವೆ
ಕಂದ ನೀನು ಎಷ್ಟು ಮುದ್ದಾಗಿರುವೆ!!
ಚಂದ್ರ ನೀನು ನನ್ನ ಸೂರ್ಯ ನೀನು.....

!!ಮಗು ನೀನು ಖುಷಿಯಲ್ಲಿರುವೆ
ನಿನ್ನ ಗೊಂಬೆಯ ಮದುವೆ ಇಂದಿಗೆ-೨
ಆಶಿರ್ವಾದ ನನ್ನ
ಆರೈಕೆ ನನ್ನ
ಸೆರಗಲ್ಲಿ ಮದು ಮಗಳಿಗೆ ಬರುತ್ತಿದೆ ನಾಚಿಗೆ
ಹೀಗೆಯೇ ಎಂದೂ ಮದುವೆ ಆಗುವುದು ನಿನ್ನ
ಮದುಮಗ ಆಗುವೆ
ಚಂದವಾಗಿರುವೆ ನೀನು !!
ಚಂದ್ರ ನೀನು ನನ್ನ ಸೂರ್ಯ ನೀನು.....

!!ಮೂಡಲ ಗಾಳಿ ಬೀಸುತ್ತಿದೆ ವನದಲಿ
ಪಕ್ಷಿ ಹಾರುತ್ತಿದೆ ಗಗನದಲಿ-೨
ದೇವರ ಕೃಪೆಯಿಂದ ದೊಡ್ಡವನಾಗಿ ನೀನು
ಮೋಡವಾಗಿ ತೇಲುವೆ ಆಕಾಶದಲಿ
ಯಾರೂ ನೋಡಿದರೆ ಅವರು ಹೇಳುವರು
ಯಾವ ತಾಯಿಯ ಮುದ್ದು ಮಗ ನೀನು !!
ಚಂದ್ರ ನೀನು ನನ್ನ ಸೂರ್ಯ ನೀನು.....

ಮೂಲ :ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಎಸ್.ಡೀ.ಬರ್ಮನ್
ಚಿತ್ರ :ಆರಾಧನಾ

Chanda Hai Tu, Mera Suraj Hai Tu,
O Meri Aankhon Ka Tara Hai Tu - (3)
Jiti Hu Main Bas Tujhe Dekhakar,
 Iss Tute Dil Ka Sahara Hai Tu

Tu Khele Khel Kayi,
 Mera Khilona Hai Tu - (2)
Jisase Bandhi Har Aasha Meri,
Mera Wo Sapna Salona Hai Tu
Nanhasa Hai Kitana Sundar Hai Tu,
Chhotasa Hai Kitana Pyara Hai Tu
Chanda Hai Tu, Mera Suraj Hai Tu

Munne Tu Khush Hai Bada,
Tere Gudde Ki Shadi Hai Aaj - (2)
Main Wari Re Main Balihari Re,
Ghunghat Mein Gudiya Ko Aati Hai Laaj
Yuhi Kabhi Hogi Shadi Teri,
Dulha Banega Kunwara Hai Tu
Chanda Hai Tu, Mera Suraj Hai Tu

Purwayi Wan Me Ude,
Panchhi Chaman Mein Ude - (2)
Ram Kare Kabhi Ho Ke Bada,
Tu Banake Badal Gagan Mein Ude
Jo Bhi Tujhe Dekhe Woh Yeh Kahe,
Kis Mann Ka Aisa Dulara Hai Tu
Chanda Hai Tu, Mera Suraj Hai Tu

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...