Tuesday, March 26, 2013

ಹೋಳಿ


ಹೋಳಿ
_______
ಅವನು ಮುಸ್ಲಿಂ.
ಯಾವುದೇ ಮಾತಿಗೆ ಅವನ ಹಾಗು
ಅವನ ಹಿಂದೂ ಮಿತ್ರನ ಮಧ್ಯೆ ಜಗಳವಾಯಿತು.
ಹಲವು ದಿನದಿಂದ ಇಬ್ಬರ ಮಧ್ಯದಲ್ಲಿ ಮಾತು ಇರಲಿಲ್ಲ.
ಹೋಳಿಯ ಹಬ್ಬದ ದಿನ ಅವನು ಕೈಯಲ್ಲಿ
ರಂಗು ಹಿಡಿದು ಹಿಂದೂ ಮಿತ್ರನ ಮನೆಗೆ ಬಂದ.
ಒಬ್ಬರಿಗೊಬ್ಬರು ರಂಗು ಹಚ್ಚಿದರು .
ಇಬ್ಬರ ಕಣ್ಣಲ್ಲಿ ಕಣ್ಣೀರು ಇತ್ತು.
_____________
ಅವನು ಕೋಪಿಷ್ಠನೆಂದು ಪ್ರಸಿದ್ದ.
ಅವನ ಸ್ವಭಾವ ಅರಿತು
ಅವನ ಮನೆಯ ಕಡೆ ಯಾರೂ ಸುಳಿಯುತ್ತಿರಲಿಲ್ಲ.
ಏನೋ ಕೆಲಸದಿಂದ ಹೋಳಿಯ ದಿವಸ
ಮನೆಯಿಂದ ಹೊರ ಬಂದ.
ಹೋಳಿ ಆಡುವ ಮಕ್ಕಳಲ್ಲಿ
ಯಾರು ಅವನ ಸುದ್ದಿಗೆ ಹೋಗಲಿಲ್ಲ.
ಆಗ ಅವನ ಮೇಲೆ ಬಣ್ಣ ತುಂಬಿದ ಬಲೂನು ಬಂದು ಬಿತ್ತು.
ಕೋಪದಿಂದ ಹಿಂತಿರುಗಿ ನೋಡಿದ.
ಪುಟ್ಟ ಬಾಲಕನೊಬ್ಬ ಚಪ್ಪಾಳೆ ತಟ್ಟುತ್ತಿದ್ದ.
ಮನ ಕರಗಿತು ಅವನ
ಬಾಲಕನ ಮುದ್ದು ನಗು ಬಣ್ಣದಲಿ.
______________

ಎಷ್ಟೋ ವರುಷದ
ಅವನ ನಿಯಮ
ಹೋಳಿಯ ದಿವಸ
ಮನೆ ಮನೆಗೆ ಹೋಗಿ
ಮನೆಯವರೆಲ್ಲರ ಹಣೆಗೆ ಬಣ್ಣದ ತಿಲಕ ಹಚ್ಚುವುದು
ಹಾಗು ಶಾಂತಿಯಿಂದ ನಗು ಬೀರಿ ಹೋಗುವುದು.
ಆದರೆ ಈ ಹೋಳಿಯಲಿ ಅವನ ಸುಳಿವಿಲ್ಲ.
ಆಗ ಯಾರೋ ಬಂದು ಹೇಳಿದರು
ಅನ್ಯರ ಜೀವನದಲ್ಲಿ ರಂಗು ಬೀರುವವನು ಇನ್ನಿಲ್ಲವೆಂದು.
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...