Sunday, March 31, 2013

ಜೀವನ ಪಥ, ಯಾವುದು ಸರಿ ?

!!ಸಾಧಿಸುವ ಛಲವಿತ್ತು 
ಕನಸು ಹೆಣೆದು ಹೆಣೆದು 
ಈಗ ನನ್ನ ಧ್ಯೇಯ 
ಆ ಎಲ್ಲಾ ಕನಸನ್ನು 
ತನ್ನ ಪರಿಶ್ರಮದಿಂದ 
ಸಾಕಾರಗೊಳಿಸುವಲ್ಲಿ 
ನನ್ನ ಹೆಜ್ಜೆ ಸಾಗುತ್ತಿತ್ತು !!

!!ಸತ್ಯಕ್ಕೆ ಸಾವಿಲ್ಲವೆಂದು 
ಹೇಳಿದರು ಅಪ್ಪನವರು 
ನಡೆದೇ ಆ ಪಥದಲಿ
ವಿಶ್ವಾಸದಿಂದ
ಕಲ್ಲು ಮುಳ್ಳು ಎನ್ನದೆ
ಸಿಕ್ಕಿದು ಕೇವಲ
ಸೋಲು, ಅಪಯಶ, ಹತಾಶೆ. ನಿರಾಶೆ!!

!!ಯಶಸ್ಸಿನ ಅಂಬರಕ್ಕೆ
ಸೀಮೆ ಇಲ್ಲವೆಂದರು ಅಪ್ಪನವರು
ಆದರೆ ನನಗೆ ಯಶಸ್ಸು ಶಿಖರದಂತೆ
ಕಾಣುತ್ತಿತ್ತು
ಕುಗ್ಗಿದ ದೇಹದಲಿ ಶಕ್ತಿ ಎಲ್ಲಿ ಏರಲು
ಉತ್ಸಾಹ ಸಹ ಕುಂದಿತ್ತು
ಆಲಸ್ಯ ನೆತ್ತಿಗೆ ಏರಿ ಹೋಗಿತ್ತು!!

!!ಅಪ್ಪನ ಮಾತು ನಿರ್ಲಕ್ಷಿಸಿ
ಹೊಕ್ಕಿದೆ
ಖೋಟ ಜಗತ್ತಿನ ಜಗಮಗದಲಿ
ಎಲ್ಲವೂ ಸುಲಭ ಸುಲಭ
ಹಣ ನೀರಿನಂತೆ ಹರಿಯಿತು
ಐಶ್ವರ್ಯ ಸಂಪತ್ತಿನ ಮಳೆ ಸುರಿಯಿತು
ಅಂತಸ್ತು ಏರಿತು!!

!!ಆದರೆ ಅಪ್ಪ ಬರಲಿಲ್ಲ
ಮಗನ ಆಡಂಬರದ ಮೆರೆಯಲಿ
ನನ್ನ ಈ ರೂಪ
ಅವರ ಸೋಲಾಗಿತ್ತು
ಆದರೆ ಅಹಂ ಅಭಿಮಾನದಿಂದ
ನನ್ನ ಕಣ್ಣು ಕುರುಡಾಗಿತ್ತು
ನನ್ನಲ್ಲಿಯ ಮನುಷ್ಯ ಸತ್ತು ಹೋಗಿತ್ತು !!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...