Friday, March 29, 2013

ಕಳೆದಿದೆ ಆ ದಿನಗಳು

ಕಳೆದಿದೆ ಆ ದಿನಗಳು
ಈಗ ಅಲ್ಲಿ ಹೂವು ಅರಳುವುದಿಲ್ಲ
ಮೌನವಿದೆ ಅಲ್ಲಿ
ಶಾಂತತೆ ಪಸರಿದೆ
ಒಣಗಿದ ಮುಳ್ಳುಗಳು ಕೊನೆ ಉಸಿರೆಲೆಯುತ್ತಿದೆ

ಕಳೆದಿದೆ ಆ ದಿನಗಳು
ಹಾಡುವ ಭ್ರಮರ
ಈಗ ಅಲ್ಲಿ ಸುಳಿಯುವುದಿಲ್ಲ
ಒಮ್ಮೆ ಬಂದು ಗಾಯಗೊಂಡಿದೆ
ನಿಷ್ಕರುಣಿ ಮುಳ್ಳಿನ ಏಟಿನಿಂದ

ಕಳೆದಿದೆ ಆ ದಿನಗಳು
ಸದಾ ಚಿಲಿಪಿಲಿ ಎಂಬ ಸಂಗೀತ ನುಡಿಯುವ
ಹಕ್ಕಿಗಳು ಈಗ ಬರುವುದಿಲ್ಲ
ಸುತ್ತ ಮುತ್ತ ಹಬ್ಬಿದ ಪೊದೆಗಳಲ್ಲಿ
ಸಿಕ್ಕಿಕೊಳ್ಳುವ ಭಯದಿಂದ

ಕಳೆದಿದೆ ಆ ದಿನಗಳು
ಈಗ ಹಗಲಲ್ಲೂ
ಕತ್ತಲೆಯ ಸಾಮ್ರಾಜ್ಯ
ವಿಚಿತ್ರ ವಾತಾವರಣ
ಎಲ್ಲೆಡೆ ದುಃಖ ವೇದನೆಯ ಅನಾವರಣ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...