ನನ್ನ ಮನಸ್ಸಲಿ ಏನಿದೆ ಇಂದು
ನೀ ಹೇಳಿದರೆ ನಾ ತಿಳಿಸುವೆ-೨
ನಿನ್ನ ಕೇಶ ಮತ್ತೆ ಸಿಂಗಾರಿಸುವೆ
ನಿನ್ನ ಹಣೆಯಲಿ ಕುಂಕುಮ ಹಚ್ಚುವೆ-೨
ನನ್ನ ಮನಸ್ಸಲಿ ಇಂದು ಏನಿದೆ.....
ನನ್ನನ್ನು ದೇವರಂತೆ
ನಿನ್ನ ಪ್ರೀತಿಯೂ ಪೂಜಿಸಿದೆ-೨
ನನ್ನ ಪ್ರೀತಿ ಹೇಳುತ್ತಿದೆ
ನಾ ನಿನ್ನನ್ನು ದೇವತೆ ಮಾಡಲೆಂದು-೨
ನನ್ನ ಮನಸ್ಸಲಿ ಏನಿದೆ ಇಂದು.....
ಯಾರು ಹುಡುಕಲು ಬಂದರೆ
ನಮ್ಮನ್ನು ಹುಡುಕಲಾರ-೨
ನೀ ನನ್ನನ್ನು ಎಲ್ಲೊ ಅಡಗಿಸು
ನಾ ನಿನ್ನನ್ನು ಎಲ್ಲೊ ಅಡಗಿಸುವೆ-೨
ನನ್ನ ಮನಸ್ಸಲಿ ಏನಿದೆ ಇಂದು.....
ನನ್ನ ಅಲಿಂಗನದಲಿ ಬಂದು
ನಿನ್ನ ನೋವು ನೆಮ್ಮದಿ ಪಡೆಯುತ್ತದೆ-೨
ನಿನ್ನ ಕೇಶ ರಾಶಿಯಲಿ ಅಡಗಿ
ನಾ ಜಗದ ದುಃಖ ಮರೆಯುವೆ-೨
ನಿನ್ನ ಕೇಶ ಮತ್ತೆ ಸಿಂಗಾರಿಸುವೆ
ನಿನ್ನ ಹಣೆಯಲಿ ಕುಂಕುಮ ಹಚ್ಚುವೆ
ನನ್ನ ಮನಸ್ಸಲಿ ಏನಿದೆ ಇಂದು.....
ಮೂಲ : ಸಾಹಿರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ದಾಗ್
मेरे दिल में आज क्या है, तू कहे तो मैं बता दूँ
तेरी जुल्फ फिर सवारू, तेरी मांग फिर सजा दूँ
मुझे देवता बनाकर, तेरी चाहतोंने पूजा
मेरा प्यार कह रहा है, मैं तुझे खुदा बना दूँ
कोई ढूंढने भी आये, तो हमे ना ढूंढ पाए
तू मुझे कही छूपा दे, मैं तुझे कही छूपा दूँ
मेरे बाजूओं में आ के, तेरा दर्द चैन पाए
तेरे गेसुओं में छूप कर, मैं जहाँ के गम भूला दूँ
http://www.youtube.com/watch?v=nhd4CBmhDgk
No comments:
Post a Comment