Tuesday, March 5, 2013

ಬಾ ನಡೆ ನಿನಗೆ

!!ಬಾ ನಡೆ ನಿನಗೆ 
ನಾ ಕೊಂಡೊಯ್ಯುವೆ 
ಒಂದು ಹೊಸ ಆಕಾಶದ ಅಡಿಯಲಿ 
ಅಲ್ಲಿ ದುಃಖ ಇರದಿರಲಿ 
ಕಣ್ಣೀರು ಸಹ ಇರದಿರಲಿ 
ಕೇವಲ ಪ್ರೀತಿ ಪ್ರೇಮ ಇರಲಿ !!
ಒಂದು ಹೊಸ ಆಕಾಶದ ಅಡಿಯಲಿ ...

!!ಅಲ್ಲಿ ಸೂರ್ಯನ ಪ್ರಥಮ ಕಿರಣದಲಿ 
ಭರವಸೆಯ ಮುಂಜಾನೆ ಉದ್ಭವಿಸುವುದು 
ಚಂದ್ರ ಕಿರಣದಿಂದ ಶುಚಿಯಾಗಿ
ಕರಿ ಕತ್ತಲೆ ಓಡುವುದು
ಕೆಲವೊಮ್ಮೆ ಬಿಸಿಲಿನ ಆಟ
ಕೆಲವೊಮ್ಮೆ ನೆರಳಿನ ಸುಖ
ಆಯಾಸವಾಗದು ದೂರದ ಪ್ರಯಾಣದಲಿ !!
ಯಾವುದೇ ದುಃಖ ಇರದಿರಲಿ ....

!!ಅಲ್ಲಿ ದೂರ ತನಕ ದೃಷ್ಟಿ ಬೀರಿದಾಗ
ಮುಕ್ತ ಗಗನದ ಅಲೆಗಳಿರುವುದು
ಅಲ್ಲಿ ಬಣ್ಣ ಬಣ್ಣದ ಪಕ್ಷಿಗಳು
ಭರವಸೆಯ ಸಂದೇಶ ತರುವುದು
ಸುಖ ಕನಸಿನಲೂ
ನಗುವ ಹೂಗಳು
ಸುಂದರ ಸೂರ್ಯಾಸ್ತವಾಗುವುದು ಸಂಜೆಯಲಿ !!
ಯಾವುದೇ ದುಃಖ ಇರದಿರಲಿ ....

!!ಕನಸಿನ ಆ ಲೋಕದಲಿ
ಪ್ರೀತಿಯೇ ಪ್ರೀತಿ ಅರಳುವುದು
ನಾವು ಹೋಗಿ ಅಲ್ಲಿ ಮರೆಯಾಗುವ
ಇರದಿರಲಿ ಯಾವುದೇ ಅತೃಪ್ತಿ ಪಶ್ಚಾತ್ತಾಪವೂ
ಎಲ್ಲಿಯೂ ದ್ವೇಷ ಇರದಿರಲಿ
ಯಾರೂ ಪರವೆಂಬ ಭೇದ ಇರದಿರಲಿ
ಎಲ್ಲರೂ ಒಟ್ಟಿಗೆ ಹೀಗೆಯೇ ನಡೆಯುತ ಸಾಗಲಿ !!
ಯಾವುದೇ ದುಃಖ ಇರದಿರಲಿ ....

ಮೂಲ/ಸಂಗೀತ /ಹಾಡಿದವರು : ಕಿಶೋರ್ ಕುಮಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಚಿತ್ರ : ದೂರ್ ಗಗನ್ ಕಿ ಚಾಂವ್ ಮೇ

आ चल के तुझे, मैं ले के चलूं
इक ऐसे गगन के तले
जहाँ ग़म भी न हो, आँसू भी न हो
बस प्यार ही प्यार पले

सूरज की पहली किरण से, आशा का सवेरा जागे
चंदा की किरण से धुल कर, घनघोर अंधेरा भागे
कभी धूप खिले, कभी छाँव मिले
लम्बी सी डगर न खले
जहाँ ग़म भी नो हो...

जहाँ दूर नज़र दौड़ाएं, आज़ाद गगन लहराए
जहाँ रंग बिरंगे पंछी, आशा का संदेसा लाएँ
सपनों में पली, हँसती हो कली
जहाँ शाम सुहानी ढले
जहाँ ग़म भी न हो...

सपनों के ऐसे जहां में, जहाँ प्यार ही प्यार खिला हो
हम जा के वहाँ खो जाएं, शिकवा न कोई गिला हो
कहीं बैर न हो, कोई गैर न हो
सब मिलके यूँ चलते चलें
जहाँ गम भी न हो...

http://www.youtube.com/watch?v=V8vQxix0yyo

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...