Monday, September 23, 2013

ನಾ ನನ್ನ ಕಥೆಯನ್ನು ಹೇಳಿಕೊಂಡರೆ

ನಾ ನನ್ನ ಕಥೆಯನ್ನು ಹೇಳಿಕೊಂಡರೆ
ನೀನು ಅಳುವುದೇಕೆ
ದುಸ್ಥಿತಿ ನನ್ನ ಹೃದಯಕ್ಕೆ ಬಂದಿದೆ
ನೀನು ಅಳುವುದೇಕೆ

ಈ ನೋವು ಕೊರಗು ನನ್ನದಾಗಿದೆ
ನೀನೇಕೆ ಸಹಿಸುತ್ತಿರುವೆ ಇದನ್ನ
ಅದೇಕೆ ನನ್ನ ಕಣ್ಣೀರು
ನಿನ್ನ ಕಣ್ಣಿಂದ ಹರಿಯುತ್ತಿದೆ ಚಿನ್ನ
ದುಃಖದ ಅಗ್ನಿ ನಾನೇ ಹಚ್ಚಿದ್ದೇನೆ
ನೀನು ಅಳುವುದೇಕೆ
ನಾ ನನ್ನ.....

ತುಂಬಾ ಅತ್ತು ಬಿಟ್ಟೆ ಆದರೆ  
ಇನ್ನು ನಿನಗೋಸ್ಕರ ಅಳಲಾರೆ
ನನ್ನ ನೆಮ್ಮದಿ ಕಳೆದುಕೊಂಡು
ನಿನ್ನ ನೆಮ್ಮದಿಯನ್ನು ಹಾಳು ಮಾಡಲಾರೆ
ಕಳವಳ ನಿನ್ನ ಅಶ್ರು ತಂದಿದೆ
ನೀನು ಅಳುವುದೇಕೆ
ನಾ ನನ್ನ.....

ಈ ಕಣ್ಣೀರು ನಿಲ್ಲದಿದ್ದರೆ ನೋಡಿನ್ನು
ನಾನೂ  ರೋದಿಸುವೆ
ನಾನು ನನ್ನ ಕಣ್ಣೀರಿನಲ್ಲಿ
ಚಂದ್ರ ತಾರೆ ಮುಳುಗಿಸುವೆ
ಮುಗಿದೋಗುವುದು ಎಲ್ಲಾ ನೋವು ಸಂಕಟ
ನೀನು ಅಳುವುದೇಕೆ
ನಾ ನನ್ನ.....


ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ವೋ ಕೌನ್ ತಿ
Jo humne dastan apni sunayi
aap kyun roye
Tabahi to hamare dil pe aayi
aap kyun roye
Hamara dard-o-gham hai yeh ise kyun
aap sehte hain
Yeh kyun aasoon hamare aapki
aankhon se behte hain
Ghamon ki aag humne khud lagayi
aap kyun roye
Jo humne dastan apni sunayi
aap kyun roye
Bahut roye magar ab aapki
khaatir na royenge
Na apna chain khokar aapka
hum chain khoyenge
Qayamat aapke ashkon ne dhaayi
aap kyun roye
Jo humne dastan apni sunayi
aap kyun roye
Na yeh aansoon ruke to dekhiye phir
hum bhi ro denge
Hum apne aansuon mein chand taaron
ko doobo denge
Fanaah ho jaayegi saari khudai
aap kyun roye
Jo humne dastan apni sunayi
aap kyun roye

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...