Saturday, April 27, 2013
Thursday, April 25, 2013
ಹೃದಯ ಈ ರೀತಿ ಯಾರೋ ನನ್ನ ಮುರಿದರು
!!ಹೃದಯ ಈ ರೀತಿ
ಯಾರೋ ನನ್ನ ಮುರಿದರು
ವಿನಾಶದ ಮಾರ್ಗಕ್ಕೆ ದೂಡಿದರು-೨
ಒಬ್ಬ ಸಭ್ಯ ಮನುಷ್ಯನನ್ನು ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....
!!ಸಾಗರ ಎಷ್ಟು ನನ್ನ ಬಳಿಯಲ್ಲಿದೆ
ನನ್ನ ಜೀವನದಲಿ ಆದರೂ ದಾಹವಿದೆ
ಇದೆ ದಾಹ ದೊಡ್ಡ
ಜೀವನ ಸಣ್ಣದು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....
!!ಈ ಪ್ರಪಂಚದ ಪಥಗಳು ಹೇಳುತ್ತಿದೆ
ಗಮ್ಯವಿಲ್ಲ ಈಗ ನಿನಗೋಸ್ಕರ ಯಾವುದೇ
ಸೋಲಿನಿಂದ ನನ್ನ ಸಂಬಂಧ ಜೋಡಿಸಿದರು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....
!!ಮುಳುಗಿದ ಸೂರ್ಯ ಪುನಃ ಉದಯವಾಗಲಿದೆ
ಕತ್ತಲು ಎಂದೂ ಉಳಿಯುವುದಿಲ್ಲ
ನನ್ನ ಸೂರ್ಯ ಹೀಗೆ ಮುನಿಸಿತು
ಮುಂಜಾನೆಯನ್ನು ನಾನೆಂದೂ ನೋಡಲಿಲ್ಲ
ಬೆಳಕೆಲ್ಲ ನನ್ನನ್ನು ತೊರೆದರು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....
ಮೂಲ : ಇಂದೀವರ್
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಶ್ಯಾಮಲ್ ಮಿತ್ರ
ಚಿತ್ರ : ಅಮಾನುಶ್
dil aisa kisine mera toda, barbadi kee taraf aisa moda
dil aisa kisine mera toda, barbadi kee taraf aisa moda
yek bhale manush ko amanush bana ke chhoda
dil aisa kisine mera toda, barbadi kee taraf aisa moda
sagar kitna mere pas hai, mere jiwan me fir bhi pyas hai
hai pyas badi jiwan thoda, amanush bana ke chhoda
dil aisa kisine mera toda, barbadi kee taraf aisa moda
kehte hain yeh dooniya ke raste, koyi manjil nahee tere waste
nakamiyo se nata mera joda, amanush bana ke chhoda
dil aisa kisine mera toda, barbadi kee taraf aisa moda
duba suraj fir se nikale, rehta nahee hain andhera
mera suraj aisa ruthha, dekha na maine savere
ujalo ne sath mera chhoda, amanush bana ke chhoda
dil aisa kisine mera toda, barbadi kee taraf aisa moda
Wednesday, April 24, 2013
Tuesday, April 23, 2013
Kabir Doha (ಕಬೀರ ದೋಹ )
ಕಬೀರ ದೋಹ
ಉಪ್ಪು ನೋಡಿ ಹೊರಟಿತು, ಅಳೆಯಲು ಸಮುದ್ರದ ಆಳವನ್ನು!
ತಾನೇ ನೀರಲ್ಲಿ ಕರಗಿತು, ಯಾರು ಹೇಳಲು ಬರುವರು ಆಳವನ್ನು !!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
चली जो पुतली लौन की, थाह सिंधु का लेन |
आपहू गली पानी भई, उलटी काहे को बैन ||
(ಭಗವಂತ ಸಮುದ್ರ ಸಮಾನ, ಭಕ್ತ ಅವನ ಆಳ ಅಳೆಯಲು ಹೋಗಿ ಅವನಲ್ಲಿ ಮರೆಯಾಗುತ್ತಾನೆ.
ಅಂದರೆ ಭಗವಂತನ ಇದ್ದಾನೆ, ಇಲ್ಲ ಎಂಬ ವರದಿ ನೀಡುವವರು ಅಸ್ತಿತ್ವದಲ್ಲಿಲ್ಲ )
ಉಪ್ಪು ನೋಡಿ ಹೊರಟಿತು, ಅಳೆಯಲು ಸಮುದ್ರದ ಆಳವನ್ನು!
ತಾನೇ ನೀರಲ್ಲಿ ಕರಗಿತು, ಯಾರು ಹೇಳಲು ಬರುವರು ಆಳವನ್ನು !!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
चली जो पुतली लौन की, थाह सिंधु का लेन |
आपहू गली पानी भई, उलटी काहे को बैन ||
(ಭಗವಂತ ಸಮುದ್ರ ಸಮಾನ, ಭಕ್ತ ಅವನ ಆಳ ಅಳೆಯಲು ಹೋಗಿ ಅವನಲ್ಲಿ ಮರೆಯಾಗುತ್ತಾನೆ.
ಅಂದರೆ ಭಗವಂತನ ಇದ್ದಾನೆ, ಇಲ್ಲ ಎಂಬ ವರದಿ ನೀಡುವವರು ಅಸ್ತಿತ್ವದಲ್ಲಿಲ್ಲ )
Monday, April 22, 2013
Sunday, April 21, 2013
ನಮ್ಮ ಮನಸ್ಸಿಗೆ ಶಕ್ತಿ ನೀಡು
ನಮ್ಮ ಮನಸ್ಸಿಗೆ ಶಕ್ತಿ ನೀಡು
ಮನಸ್ಸಿನ ವಿಜಯವಾಗಲಿ
ಅನ್ಯರಿಗೆ ನೆರವಾಗುವ ಮುಂಚೆ
ಸ್ವತಃ ಶಕ್ತರಾಗುವಂತಾಗಲಿ-೨
ನಮ್ಮ ಮನಸ್ಸಿಗೆ...
ಭೇದ ಭಾವ ತನ್ನ ಹೃದಯದಿಂದ
ಶುಚಿ ಮಾಡುವಂತಾಗಲಿ-೨
ಮಿತ್ರರಿಂದ ತಪ್ಪಾದರೆ
ಕ್ಷಮಿಸುವಂತಾಗಲಿ-೨
ಸುಳ್ಳಿಂದ ರಕ್ಷಿಸಿ
ಸತ್ಯವನ್ನು ಕಾಪಾಡುವಂತಾಗಲಿ-೨
ಅನ್ಯರಿಗೆ ನೆರವಾಗುವ...
ಕಷ್ಟಗಳು ಒದಗಿದರೆ
ಇಷ್ಟೊಂದು ಉಪಕಾರ ಮಾಡು-೨
ಜೊತೆ ನೀಡುವುದಾದರೂ ಧರ್ಮದ
ನಡೆದರೂ ಹಾದಿಯಲಿ ಧರ್ಮದ-೨
ತನ್ನಲ್ಲಿ ಧೈರ್ಯವಿರಲಿ
ದುಷ್ಟತೆಯಿಂದ ಹೆದರದಿರಲಿ-೨
ಅನ್ಯರಿಗೆ ನೆರವಾಗುವ...
ಮೂಲ : ಗುಲ್ಶಾರ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ವಾಣಿ ಜಯರಾಂ
ಸಂಗೀತ : ವಸಂತ್ ದೇಸಾಯಿ
ಚಿತ್ರ : ಗುಡ್ಡಿ
Hamko manki shakti dena man vijay karen
doosron ki jay se pahle khudko jay karen
doosron ki jay se pahle khudko jay karen
Hamko manki shakti dena man vijay karen
doosron ki jay se pahle khudko jay karen
Hamko manki shakti dena
bhed bhaav
bhed bhaav apne dil se saaf kar saken
bhed bhaav apne dil se saaf kar saken
doston se bhool ho to maaf kar saken
doston se bhool ho to maaf kar saken
jhooth se bache rahen sach ka dam bharen
jhooth se bache rahen sach ka dam bharen
doosron ki jay se pahle khud ko jay karen
Hamko manki shakti dena man vijay karen
doosron ki jay se pahle khud ko jay karen
Hamko manki shakti dena
mushkilen paden to hampe itna karm kar
mushkilen paden to hampe itna karm kar
saath de to dharm ka chale to dharm par
saath de to dharm ka chale to dharm par
khud pe hausla rahe badi se na daren
khud pe hausla rahe badi se na daren
doosron ki jay se pahle khud ko jay karen
Hamko manki shakti dena man vijay karen
doosron ki jay se pahle khud ko jay karen
Hamko manki shakti dena
ಮನಸ್ಸಿನ ವಿಜಯವಾಗಲಿ
ಅನ್ಯರಿಗೆ ನೆರವಾಗುವ ಮುಂಚೆ
ಸ್ವತಃ ಶಕ್ತರಾಗುವಂತಾಗಲಿ-೨
ನಮ್ಮ ಮನಸ್ಸಿಗೆ...
ಭೇದ ಭಾವ ತನ್ನ ಹೃದಯದಿಂದ
ಶುಚಿ ಮಾಡುವಂತಾಗಲಿ-೨
ಮಿತ್ರರಿಂದ ತಪ್ಪಾದರೆ
ಕ್ಷಮಿಸುವಂತಾಗಲಿ-೨
ಸುಳ್ಳಿಂದ ರಕ್ಷಿಸಿ
ಸತ್ಯವನ್ನು ಕಾಪಾಡುವಂತಾಗಲಿ-೨
ಅನ್ಯರಿಗೆ ನೆರವಾಗುವ...
ಕಷ್ಟಗಳು ಒದಗಿದರೆ
ಇಷ್ಟೊಂದು ಉಪಕಾರ ಮಾಡು-೨
ಜೊತೆ ನೀಡುವುದಾದರೂ ಧರ್ಮದ
ನಡೆದರೂ ಹಾದಿಯಲಿ ಧರ್ಮದ-೨
ತನ್ನಲ್ಲಿ ಧೈರ್ಯವಿರಲಿ
ದುಷ್ಟತೆಯಿಂದ ಹೆದರದಿರಲಿ-೨
ಅನ್ಯರಿಗೆ ನೆರವಾಗುವ...
ಮೂಲ : ಗುಲ್ಶಾರ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ವಾಣಿ ಜಯರಾಂ
ಸಂಗೀತ : ವಸಂತ್ ದೇಸಾಯಿ
ಚಿತ್ರ : ಗುಡ್ಡಿ
Hamko manki shakti dena man vijay karen
doosron ki jay se pahle khudko jay karen
doosron ki jay se pahle khudko jay karen
Hamko manki shakti dena man vijay karen
doosron ki jay se pahle khudko jay karen
Hamko manki shakti dena
bhed bhaav
bhed bhaav apne dil se saaf kar saken
bhed bhaav apne dil se saaf kar saken
doston se bhool ho to maaf kar saken
doston se bhool ho to maaf kar saken
jhooth se bache rahen sach ka dam bharen
jhooth se bache rahen sach ka dam bharen
doosron ki jay se pahle khud ko jay karen
Hamko manki shakti dena man vijay karen
doosron ki jay se pahle khud ko jay karen
Hamko manki shakti dena
mushkilen paden to hampe itna karm kar
mushkilen paden to hampe itna karm kar
saath de to dharm ka chale to dharm par
saath de to dharm ka chale to dharm par
khud pe hausla rahe badi se na daren
khud pe hausla rahe badi se na daren
doosron ki jay se pahle khud ko jay karen
Hamko manki shakti dena man vijay karen
doosron ki jay se pahle khud ko jay karen
Hamko manki shakti dena
ಬೇಸರದ ಲತೆ
ಬೆಳೆಯುತ್ತಿದೆ
ಬೇಸರದ ಲತೆ
ದೂರವಿದ್ದ ಮರವನ್ನು
ಬಿಗಿದಪ್ಪಿ ಅಳುವ ತವಕ
ಭಾರ ಕಡಿಮೆ ಆದೀತು ಎಂಬ ಭ್ರಮೆ
by ಹರೀಶ್ ಶೆಟ್ಟಿ,ಶಿರ್ವ
ಬೇಸರದ ಲತೆ
ದೂರವಿದ್ದ ಮರವನ್ನು
ಬಿಗಿದಪ್ಪಿ ಅಳುವ ತವಕ
ಭಾರ ಕಡಿಮೆ ಆದೀತು ಎಂಬ ಭ್ರಮೆ
by ಹರೀಶ್ ಶೆಟ್ಟಿ,ಶಿರ್ವ
Thursday, April 18, 2013
Kabir Doha (ಕಬೀರ ದೋಹ )
ಕಬೀರ ದೋಹ
ಕಬೀರ ಈ ಮನಸ್ಸು ಲೋಭಿ, ಅರ್ಥವಾಗದ ಪೆದ್ದ !!
ಭಕ್ತಿ ಮಾಡಲು ಆಲಸಿ, ತಿನ್ನಲು ಸಿದ್ಧ !!
ಕಬೀರ ಮನಸ್ಸು ಮದದಾನೆ, ವಶದಲ್ಲಿರಬೇಕು !
ವಿಷದ ಬಳ್ಳಿಯಲ್ಲಿ ಸೆರೆ ಆಗದಿರಿ,ಅಮೃತ ಫಲ ಸವಿಯಬೇಕು !!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
कबिरा यह मन लालची, समझै नहीं गंवार।
भजन करन को आलसी, खाने को तैयार।।
कबिरा मन ही गयंद है, आंकुष दे दे राखु ।
विष की बेली परिहरी, अमरित का फल चाखु ।।
ಗುಲ್ ಮೊಹರ್ ಒಂದು ವೇಳೆ ಹೆಸರಾಗಿದ್ದರೆ ನಿನ್ನ
!!ಗುಲ್ ಮೊಹರ್
ಒಂದು ವೇಳೆ ಹೆಸರಾಗಿದ್ದರೆ ನಿನ್ನ
ನಿಸರ್ಗದ ಹೂವನ್ನು ರಮಿಸುವುದೂ
ಕೆಲಸವಾಗುತ್ತಿತ್ತು ನನ್ನ!!
!!ಬಂದಾಗ ವಸಂತ ಋತು
ಹೇಳವರಿಗೆ ಸ್ವಲ್ಪ ಕೇಳೆಂದು
ಹೇಗೆ ಅದರ ವಸಂತವೆಂದು ಹೆಸರಾಗುತ್ತಿತ್ತು
ನನ್ನ ಹೂವಿನ ವಿನಾಃ !!
ಗುಲ್ ಮೊಹರ್
ಒಂದು ವೇಳೆ ಹೆಸರಾಗಿದ್ದರೆ ನಿನ್ನ...
!!ಸಂಜೆಯ ಗುಲಾಬಿ ಸೆರಗಲ್ಲಿ
ದೀಪ ಬೆಳಗುತ್ತಿದೆ ಚಂದ್ರನ
ಹೇಗೆ ಅದರ ಚಂದ್ರವೆಂದು ಹೆಸರಾಗುತ್ತಿತ್ತು
ನನ್ನವರ ವಿನಾಃ !!
ಗುಲ್ ಮೊಹರ್
ಒಂದು ವೇಳೆ ಹೆಸರಾಗಿದ್ದರೆ ನಿನ್ನ...
ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್, ಲತಾ ಮಂಗೇಶ್ಕರ್
ಸಂಗೀತ : ಆರ್ .ಡೀ.ಬರ್ಮನ್
ಚಿತ್ರ : ದೇವತಾ
gulmohar gar tumhara nam hota
mausame gul ko hasana bhee hamara kam hota
aayengee bahare toh abke unhe kehna jara itna sune
mere gul bina kaha unka bahar nam hota
gulmohar gar tumhara nam hota.......
sham ke gulabee se aanchal me ek diya jala hai chand kaa
mere unn bina kaha uska chand nam hota
gulmohar gar tumhara nam hota......
http://www.youtube.com/watch?v=eG5CqEIQtFE
ಭೂಮಿ ಅಂದರೆ
ಮಗು : ಅಮ್ಮ ಇದೇನು ?
ಅಮ್ಮ : ಭೂಮಿ ನಡುಗುತ್ತಿದೆ, ಮಗ .
ಮಗು :ಆದರೆ ನೀನೇಕೆ ಇಷ್ಟು ಚಿಂತೆಯಲಿ, ಭೂಮಿ ನಡುಗಿದರೆ ಏನಾಗುತ್ತದೆ ?
ಅಮ್ಮ :ಕಷ್ಟವಾಗುತ್ತದೆ , ನೋವಾಗುತ್ತದೆ, ಭೂಮಿ ಅಂದರೆ ನಿನಗೆ ನಾನು ಇದ್ದ ಹಾಗೆ, ಮಗು.
by ಹರೀಶ್ ಶೆಟ್ಟಿ,ಶಿರ್ವ
ಅಮ್ಮ : ಭೂಮಿ ನಡುಗುತ್ತಿದೆ, ಮಗ .
ಮಗು :ಆದರೆ ನೀನೇಕೆ ಇಷ್ಟು ಚಿಂತೆಯಲಿ, ಭೂಮಿ ನಡುಗಿದರೆ ಏನಾಗುತ್ತದೆ ?
ಅಮ್ಮ :ಕಷ್ಟವಾಗುತ್ತದೆ , ನೋವಾಗುತ್ತದೆ, ಭೂಮಿ ಅಂದರೆ ನಿನಗೆ ನಾನು ಇದ್ದ ಹಾಗೆ, ಮಗು.
by ಹರೀಶ್ ಶೆಟ್ಟಿ,ಶಿರ್ವ
Tuesday, April 16, 2013
ಸೇಂದಿ ಅಂಗಡಿ
ಮುಂಜಾನೆ ಸಂಜೆ ಎಂದಿಲ್ಲ
ಎದ್ದ ಸಮಯವೇ
ಅವನಿಗೆ
ಪ್ರಭಾತ !
ಅವನು ಧರಿಸುವ ಬಟ್ಟೆ
ಅಂದರೆ
ಒಂದು ಹರಕಲು ಬನಿಯಾನು
ಸೊಂಟಕ್ಕೆ ಲುಂಗಿ !
ಹಬ್ಬದ ದಿವಸ
ಆವನ ಮೈ ಹಾಗು
ಉಟ್ಟ ಬಟ್ಟೆಗೆ
ಸಾಬೂನು ನೀರಿನ ಭಾಗ್ಯ!
ಪೇಟೆಯ ಯಾವುದೇ ಅಂಗಡಿಯ ಬಗ್ಗೆ
ಅವನಿಗೆ ಆಸಕ್ತಿ ಇಲ್ಲ
ಒಂದು ಅಂಗಡಿ ಬಿಟ್ಟು
"ಸೇಂದಿ ಅಂಗಡಿ" !
ಅವನ ಹಾಸಿಗೆ
ಅಂದರೆ
ಹೆಚ್ಚಾಗಿ ಯಾವುದೇ ಚರಂಡಿ ಅಲ್ಲದೆ
ಕಸದ ರಾಶಿ !
ಅವನಲ್ಲಿ ಇರುವುದು
ಒಂದೇ ಗುಣ
ಅಂದರೆ
ಪ್ರಾಮಾಣಿಕತೆ!
ಇಡಿ ಮನೆ ಬೇಕಾದರೂ
ಅವನ ಭರವಸೆಯಲ್ಲಿ
ಬಿಟ್ಟು ಹೋಗಬಹುದು
ಒಂದು ನಯ ಪೈಸೆ ಅಲ್ಲಿಲ್ಲಾಗದು !
ಆದರೆ ಮನೆಯವರಿಂದ
ಹಣ ಬಂದ ಕೂಡಲೇ
ಅವನನ್ನು ಎಳೆಯುವುದು
ಆದೇ "ಸೇಂದಿ ಅಂಗಡಿ"!
ಎಷ್ಟೋ ವರ್ಷದ ನಂತರ
ಅವನನ್ನು ನೋಡಿದ್ದು
ಈಗ ಅವನ ಶರೀರದ ಅವಸ್ಥೆ
ಇನ್ನೂ ಹಾಳು!
ಆದರೆ ಈಗಲೂ ಬೇರೆ ಯಾವದರಲ್ಲೂ
ಅವನಿಗೆ ರುಚಿ ಇಲ್ಲ
ಅವನಾಯಿತು ಹಾಗು ಅವನ
ಅದೇ "ಸೇಂದಿ ಅಂಗಡಿ" ಆಯಿತು!
by ಹರೀಶ್ ಶೆಟ್ಟಿ, ಶಿರ್ವ
ಎದ್ದ ಸಮಯವೇ
ಅವನಿಗೆ
ಪ್ರಭಾತ !
ಅವನು ಧರಿಸುವ ಬಟ್ಟೆ
ಅಂದರೆ
ಒಂದು ಹರಕಲು ಬನಿಯಾನು
ಸೊಂಟಕ್ಕೆ ಲುಂಗಿ !
ಹಬ್ಬದ ದಿವಸ
ಆವನ ಮೈ ಹಾಗು
ಉಟ್ಟ ಬಟ್ಟೆಗೆ
ಸಾಬೂನು ನೀರಿನ ಭಾಗ್ಯ!
ಪೇಟೆಯ ಯಾವುದೇ ಅಂಗಡಿಯ ಬಗ್ಗೆ
ಅವನಿಗೆ ಆಸಕ್ತಿ ಇಲ್ಲ
ಒಂದು ಅಂಗಡಿ ಬಿಟ್ಟು
"ಸೇಂದಿ ಅಂಗಡಿ" !
ಅವನ ಹಾಸಿಗೆ
ಅಂದರೆ
ಹೆಚ್ಚಾಗಿ ಯಾವುದೇ ಚರಂಡಿ ಅಲ್ಲದೆ
ಕಸದ ರಾಶಿ !
ಅವನಲ್ಲಿ ಇರುವುದು
ಒಂದೇ ಗುಣ
ಅಂದರೆ
ಪ್ರಾಮಾಣಿಕತೆ!
ಇಡಿ ಮನೆ ಬೇಕಾದರೂ
ಅವನ ಭರವಸೆಯಲ್ಲಿ
ಬಿಟ್ಟು ಹೋಗಬಹುದು
ಒಂದು ನಯ ಪೈಸೆ ಅಲ್ಲಿಲ್ಲಾಗದು !
ಆದರೆ ಮನೆಯವರಿಂದ
ಹಣ ಬಂದ ಕೂಡಲೇ
ಅವನನ್ನು ಎಳೆಯುವುದು
ಆದೇ "ಸೇಂದಿ ಅಂಗಡಿ"!
ಎಷ್ಟೋ ವರ್ಷದ ನಂತರ
ಅವನನ್ನು ನೋಡಿದ್ದು
ಈಗ ಅವನ ಶರೀರದ ಅವಸ್ಥೆ
ಇನ್ನೂ ಹಾಳು!
ಆದರೆ ಈಗಲೂ ಬೇರೆ ಯಾವದರಲ್ಲೂ
ಅವನಿಗೆ ರುಚಿ ಇಲ್ಲ
ಅವನಾಯಿತು ಹಾಗು ಅವನ
ಅದೇ "ಸೇಂದಿ ಅಂಗಡಿ" ಆಯಿತು!
by ಹರೀಶ್ ಶೆಟ್ಟಿ, ಶಿರ್ವ
ನೀ ಓಡಿ ಓಡಿ ಬಂದೆ
ಮೃದಂಗ ಬಾರಿಸಿದೆ
ನೀ ಬರಲಿಲ್ಲ
ಶಹನಾಯಿ ಊದಿದೆ
ನೀ ಬರಲಿಲ್ಲ
ಪ್ರೀತಿಯ ಪರಿ ನೋಡು
ನನಗೆ ಸೌಖ್ಯವಿಲ್ಲವೆಂದು ಗೊತ್ತಾದ ಕೂಡಲೇ
ನೀ ಓಡಿ ಓಡಿ ಬಂದೆ
by ಹರೀಶ್ ಶೆಟ್ಟಿ, ಶಿರ್ವ
ನೀ ಬರಲಿಲ್ಲ
ಶಹನಾಯಿ ಊದಿದೆ
ನೀ ಬರಲಿಲ್ಲ
ಪ್ರೀತಿಯ ಪರಿ ನೋಡು
ನನಗೆ ಸೌಖ್ಯವಿಲ್ಲವೆಂದು ಗೊತ್ತಾದ ಕೂಡಲೇ
ನೀ ಓಡಿ ಓಡಿ ಬಂದೆ
by ಹರೀಶ್ ಶೆಟ್ಟಿ, ಶಿರ್ವ
ಮೋಡಗಳಿಗೂ ಬೇಸರ
ಗೆಳತಿ
ನೋಡು,
ನನ್ನ ವ್ಯಥೆಯಿಂದ
ಇಂದು ಮೋಡಗಳಿಗೂ ಬೇಸರ
ತಟಕ್ಕನೆ ಬಂದು
ನಾಲ್ಕು ಹನಿ ಸುರಿಸಿ ಹೋದವು
by ಹರೀಶ್ ಶೆಟ್ಟಿ, ಶಿರ್ವ
ನೋಡು,
ನನ್ನ ವ್ಯಥೆಯಿಂದ
ಇಂದು ಮೋಡಗಳಿಗೂ ಬೇಸರ
ತಟಕ್ಕನೆ ಬಂದು
ನಾಲ್ಕು ಹನಿ ಸುರಿಸಿ ಹೋದವು
by ಹರೀಶ್ ಶೆಟ್ಟಿ, ಶಿರ್ವ
Monday, April 15, 2013
Sunday, April 14, 2013
ಅರಿವಾಯಿತು ಇಂದು ನನಗೆ
ಗೆಳತಿ,
ಅರಿವಾಯಿತು
ಇಂದು ನನಗೆ,
ಈ ಮೃದು ಹೃದಯಕ್ಕೆ
ವೇದನೆ ಏನೋ ಆಯಿತು,
ಆದರೆ ಮನಸ್ಸಿನ ಭ್ರಮೆ
ಎಲ್ಲ ಮಾಯವಾಯಿತು.
by ಹರೀಶ್ ಶೆಟ್ಟಿ, ಶಿರ್ವ
ಅರಿವಾಯಿತು
ಇಂದು ನನಗೆ,
ಈ ಮೃದು ಹೃದಯಕ್ಕೆ
ವೇದನೆ ಏನೋ ಆಯಿತು,
ಆದರೆ ಮನಸ್ಸಿನ ಭ್ರಮೆ
ಎಲ್ಲ ಮಾಯವಾಯಿತು.
by ಹರೀಶ್ ಶೆಟ್ಟಿ, ಶಿರ್ವ
ಹೃದಯದಲ್ಲಿದ್ದ ಪ್ರೀತಿ
ಗೆಳತಿ ,
ಯಾಕೋ ಅನಿಸುತ್ತಿದೆ
ಎಲ್ಲೊ ಮಾಯವಾದಂತಿದೆ
ನಮ್ಮ ಹೃದಯದಲ್ಲಿದ್ದ ಪ್ರೀತಿ!
ಇಲ್ಲಾದರೆ ಸಂತಸದ
ಈ ದಿನದಲ್ಲೂ
ಏಕೆ ಕಣ್ಣಲ್ಲಿ ಈ
ಕಣ್ಣೀರ ಹನಿ!
by ಹರೀಶ್ ಶೆಟ್ಟಿ, ಶಿರ್ವ
ಯಾಕೋ ಅನಿಸುತ್ತಿದೆ
ಎಲ್ಲೊ ಮಾಯವಾದಂತಿದೆ
ನಮ್ಮ ಹೃದಯದಲ್ಲಿದ್ದ ಪ್ರೀತಿ!
ಇಲ್ಲಾದರೆ ಸಂತಸದ
ಈ ದಿನದಲ್ಲೂ
ಏಕೆ ಕಣ್ಣಲ್ಲಿ ಈ
ಕಣ್ಣೀರ ಹನಿ!
by ಹರೀಶ್ ಶೆಟ್ಟಿ, ಶಿರ್ವ
Saturday, April 13, 2013
ಮಲ್ಲಿಗೆ ಹೂವಿಗೂ ಕೋಪ
ಗೆಳತಿ
ನಿನ್ನಂತೆ
ಮಲ್ಲಿಗೆ ಹೂವಿಗೂ
ನನ್ನ ಮೇಲೆ ಕೋಪ,
ನನ್ನ ಕೈ ಸೇರಿದ
ಕೂಡಲೇ
ಕೆಂಪಾಗಿ ಬಾಡಿ ಹೋಗುತ್ತದೆ.
by ಹರೀಶ್ ಶೆಟ್ಟಿ,ಶಿರ್ವ
ನಿನ್ನಂತೆ
ಮಲ್ಲಿಗೆ ಹೂವಿಗೂ
ನನ್ನ ಮೇಲೆ ಕೋಪ,
ನನ್ನ ಕೈ ಸೇರಿದ
ಕೂಡಲೇ
ಕೆಂಪಾಗಿ ಬಾಡಿ ಹೋಗುತ್ತದೆ.
by ಹರೀಶ್ ಶೆಟ್ಟಿ,ಶಿರ್ವ
ಪುರಾವೆ ಬೇಕೇ ?
ಗೆಳತಿ...
ಪ್ರೀತಿಸುವುದಿಲ್ಲ
ಎಂಬ
ಗಂಭೀರ ಆರೋಪ ಏಕೆ ?
ನನ್ನ ಅವಸ್ಥೆ
ನೋಡಿ ತಿಳಿಯುವುದಿಲ್ಲವೇ
ಇನ್ನೂ ಪುರಾವೆ ಬೇಕೇ ?
by ಹರೀಶ್ ಶೆಟ್ಟಿ, ಶಿರ್ವ
ಪ್ರೀತಿಸುವುದಿಲ್ಲ
ಎಂಬ
ಗಂಭೀರ ಆರೋಪ ಏಕೆ ?
ನನ್ನ ಅವಸ್ಥೆ
ನೋಡಿ ತಿಳಿಯುವುದಿಲ್ಲವೇ
ಇನ್ನೂ ಪುರಾವೆ ಬೇಕೇ ?
by ಹರೀಶ್ ಶೆಟ್ಟಿ, ಶಿರ್ವ
ಸತ್ಯ ಅಲ್ಲವೇ ?
ಸತ್ಯ ಅಲ್ಲವೇ ?
ಎಲ್ಲ ಅವರವರ ಇಚ್ಛೆ ಅಲ್ಲವೇ?
ಶುಭಾಶಯ ನೀಡುವುದು ನಿಮ್ಮ ಇಚ್ಛೆ
ಆದರೆ ಅದಕ್ಕೆ ಧನ್ಯವಾದ ನೀಡದಿದ್ದರೆ
ಇದು ಅವರ ಇಚ್ಛೆ ಅಲ್ಲವೇ?
ಕರೆ ಮಾಡಿ ಮಾತನಾಡುವುದು ನಿಮ್ಮ ಇಚ್ಛೆ,
ಆದರೆ ಅವರು ಮಾತಿನ ಮಧ್ಯೆ ನಿಮ್ಮ ಕರೆಯನ್ನು
ತಿರಸ್ಕರಿಸಿದ್ದರೆ ಅಲ್ಲದೆ ಪುನಃ ಒಂದು
ಕರೆ ಮಾಡಿ ವಿಚಾರಿಸದಿದ್ದರೆ
ಇದು ಅವರ ಇಚ್ಛೆ ಅಲ್ಲವೇ ?
ನಿಮಗೆ ಮಹತ್ವಪೂರ್ಣ ಎನಿಸುವ
ಅವರಿಗೆ ಅಷ್ಟು ಮಹತ್ವಪೂರ್ಣ ಎನಿಸದಿದ್ದರೆ
ಇದು ಅವರ ಇಚ್ಛೆ ಅಲ್ಲವೇ?
ಪ್ರೀತಿ, ಗೌರವ ನೀಡುವುದು ನಿಮ್ಮ ಇಚ್ಛೆ
ಆದರೆ ಆ ಪ್ರೀತಿ, ಗೌರವವನ್ನು
ಅವರು ಅನ್ಯಥಾ ಭಾವಿಸುತ್ತಿದ್ದರೆ
ಇದು ಅವರ ಇಚ್ಛೆ ಅಲ್ಲವೇ?
ಜ್ಞಾನದ ಮಾತನ್ನು ಸಾರುವವರು
ಅಜ್ಞಾನದ ಕತ್ತಲಲ್ಲಿ ಇದ್ದು
ಅಸೂಯೆಯ ಜ್ವಾಲೆಯಲ್ಲಿ
ಬೇಯುತ್ತಿದ್ದರೆ
ಇದು ಅವರ ಇಚ್ಛೆ ಅಲ್ಲವೇ ?
by ಹರೀಶ್ ಶೆಟ್ಟಿ, ಶಿರ್ವ
ಎಲ್ಲ ಅವರವರ ಇಚ್ಛೆ ಅಲ್ಲವೇ?
ಶುಭಾಶಯ ನೀಡುವುದು ನಿಮ್ಮ ಇಚ್ಛೆ
ಆದರೆ ಅದಕ್ಕೆ ಧನ್ಯವಾದ ನೀಡದಿದ್ದರೆ
ಇದು ಅವರ ಇಚ್ಛೆ ಅಲ್ಲವೇ?
ಕರೆ ಮಾಡಿ ಮಾತನಾಡುವುದು ನಿಮ್ಮ ಇಚ್ಛೆ,
ಆದರೆ ಅವರು ಮಾತಿನ ಮಧ್ಯೆ ನಿಮ್ಮ ಕರೆಯನ್ನು
ತಿರಸ್ಕರಿಸಿದ್ದರೆ ಅಲ್ಲದೆ ಪುನಃ ಒಂದು
ಕರೆ ಮಾಡಿ ವಿಚಾರಿಸದಿದ್ದರೆ
ಇದು ಅವರ ಇಚ್ಛೆ ಅಲ್ಲವೇ ?
ನಿಮಗೆ ಮಹತ್ವಪೂರ್ಣ ಎನಿಸುವ
ಅವರಿಗೆ ಅಷ್ಟು ಮಹತ್ವಪೂರ್ಣ ಎನಿಸದಿದ್ದರೆ
ಇದು ಅವರ ಇಚ್ಛೆ ಅಲ್ಲವೇ?
ಪ್ರೀತಿ, ಗೌರವ ನೀಡುವುದು ನಿಮ್ಮ ಇಚ್ಛೆ
ಆದರೆ ಆ ಪ್ರೀತಿ, ಗೌರವವನ್ನು
ಅವರು ಅನ್ಯಥಾ ಭಾವಿಸುತ್ತಿದ್ದರೆ
ಇದು ಅವರ ಇಚ್ಛೆ ಅಲ್ಲವೇ?
ಜ್ಞಾನದ ಮಾತನ್ನು ಸಾರುವವರು
ಅಜ್ಞಾನದ ಕತ್ತಲಲ್ಲಿ ಇದ್ದು
ಅಸೂಯೆಯ ಜ್ವಾಲೆಯಲ್ಲಿ
ಬೇಯುತ್ತಿದ್ದರೆ
ಇದು ಅವರ ಇಚ್ಛೆ ಅಲ್ಲವೇ ?
by ಹರೀಶ್ ಶೆಟ್ಟಿ, ಶಿರ್ವ
Subscribe to:
Posts (Atom)
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
-
ನೀಲ ಗಗನದ ನೆರಳಲಿ ದಿನ ರಾತ್ರಿಯ ಮಿಲನವಾಗುತ್ತದೆ ಹೃದಯ ಹಕ್ಕಿಯಾಗಿ ಹಾರುತ್ತದೆ ನಾನೆಲ್ಲಿಯೋ ಕಳೆದೋಗುತ್ತೇನೆ ನೀಲ ಗಗನದ.... ಯಾವುದೇ ಹೂವು ನಗುವಾಗ ಇನಿಯನ ...
-
ನಾನೊಂದು ಒಣಗಿದ ಮರ ಒಬ್ಬಂಟಿ ಈ ಬಂಜರ ಭೂಮಿಯಲಿ ಒಂದು ಕಾಲ ಇತ್ತು ನನ್ನದು ಸಹ ಆಗ ಈ ಭೂಮಿ ಫಲಿತವಾಗಿತ್ತು! ನನ್ನ ಎಲೆ ಹೂ ತುಂಬಿದ ರೆಂಬೆಯಿಂದ ತಂಗಾಳಿ ಬೀಸ...
-
ಜೇನು ನೊಣ ಜೇನು ನೊಣ ಜೇನು ನೊಣ ನಿನ್ನಲಿದೆ ಸಿಹಿಯ ಕಣ ಸಿಹಿ ಸಿಹಿ ಹುಡುಕುತ ಅಲ್ಲಿ ಇಲ್ಲಿ ತಿರುಗುತ ಹೂವಿನಿಂದ ಹೂವಿಗೆ ಮುಂಜಾನೆಯ ಶುಭಾಶಯ ನೀಡಿ ಅವರಿಂದ...