ನೂರಾರು ಸರಕುಗಳು
ಇವನೊಬ್ಬ ಬಡ ಮಾರಾಟಗಾರ
ಇವನ ಮಾಲು ಅಷ್ಟೇನೂ ಹಾಳಲ್ಲ
ಆದರೆ ಪ್ರಸಿದ್ಧ ಮಾರಾಟಗಾರರ
ಮುಂದೆ ಇವನು ನಿಲ್ಲುವುದಿಲ್ಲ
ಅಲ್ಲಿ ಗಿರಾಕಿಗಳ ಸಂದಣಿ
ಇವನ ಮಾಲನ್ನು ಮೆಚ್ಚುವವರೇ ಕೆಲವರು
ಇವನಲ್ಲಿ ಬರುವುದು ಕೆಲವರು ಇವನ ಅಪ್ತರೆ
ಬೇರೆ ಮಾರಾಟಗಾರರ ಮಾಲು
ಇವನ ಹೋಲಿಕೆಯಲ್ಲಿ ಒಳ್ಳೆಯದೇನಲ್ಲ
ಆದರೆ ಅಲ್ಲಿ ಗಿರಾಕಿ ಹೆಚ್ಚು!
ಆ ಪ್ರಸಿದ್ಧ ಮಾರಾಟಗಾರರಿಂದ ಜನರು
ಸಾಮಾನು ನೋಡದೆ ತೆಗೆದುಕೊಳ್ಳುವರು
ಅತಿ ವಿಶ್ವಾಸ ಇರಬೇಕು
ಕೆಲವರು ಅವರಲ್ಲಿ
ಕೇವಲ ಹರಟೆ ಹೊಡೆಯಲು ಬರುವರು
ಅವರ ಜನಸಂದಣಿ ಕಂಡು
ಅಲ್ಲಿ ತುಂಬಾ ಗಿರಾಕಿಯೆಂದು
ಗ್ರಾಹಕರು ಅಲ್ಲಿ ನುಗ್ಗುವುದೇ ನುಗ್ಗುವುದು
ಇವನು ಹೊಸಬ
ಯಾರು ಇಷ್ಟು ಬೇಗ ನಂಬುವರು ಇವನ್ನನ್ನು
ವಿಶ್ವಾಸ ಕಡಿಮೆ ಜನರಿಗೆ ಇವನ ಮೇಲೆ
ಇವನ ಮಾಲುಗಳ ಮೇಲೆ
ಕೆಲವರು ಕಣ್ಣು ಸಹ ಹಾಯಿಸುವುದಿಲ್ಲ
ಅವರಿಗೆ ಗೊತ್ತಾಗುವುದು ಹೇಗೆ
ಇವನ ಮಾಲು ಹೇಗೆ ಇದೆ ಎಂದು!
ಇತರ ಮಾರಾಟಗಾರರಿಗೆ
ಹೆದರಿಕೆ ಇವನಿಂದ
ಕೆಲವರಿಗೆ ಕಿಚ್ಚು ಸಹ ಇವನ ಮೇಲೆ
ಗಿರಾಕಿ ಕಡಿಮೆ ಇದ್ದರೂ
ಒಳ್ಳೆಯ ಸಾಮಾನು ನೀಡಿ
ಬೇಗ ಪ್ರಸಿದ್ಧಿ ಪಡೆಯುತ್ತಿದ್ದಾನೆಯೆಂದು
ನಮ್ಮಿಂದ ಮುಂದೆ ಹೋಗುತ್ತನೆಂದು
ಆದರೆ ಇವನು ತೃಪ್ತ ,ಆತ್ಮ ವಿಶ್ವಾಸಿ
ಪ್ರಯತ್ನದಲ್ಲೇ ಇದ್ದಾನೆ
ಯಾರದ್ದು ಹಂಗಿಲ್ಲ ಇವನಿಗೆ
ಯಾರದ್ದು ಭಯವಿಲ್ಲ ಇವನಿಗೆ!
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment