Monday, April 8, 2013

ಹೇ ಸೂರ್ಯನೆ,

ಹೇ ಸೂರ್ಯನೆ,

ಸ್ವಲ್ಪ ತಾಳ ಬಾರದಿತ್ತೆ 
ಬದುಕು ಇನ್ನೂ ಇತ್ತಲ್ಲವೆ ಬಾಕಿ 
ಹೇಗೋ ಕಳೆಯಬಹುದಿತ್ತು ಸಮಯ ಉಳಿದದ್ದು 
ಏಕೆ ಇಷ್ಟು ಬೇಗ ಅಸ್ತವಾದೆ ಎಲ್ಲವನ್ನೂ ತೊರೆದು!

ಈಗ ಕತ್ತಲು ಎಲ್ಲೆಡೆ
ಪ್ರೇಮ ಕಮಲ ಬಾಡಿದೆ 
ಇನೆಷ್ಟೋ ಅದಕ್ಕೆ ಬರಲಿದೆ ಅಡೆತಡೆ
ಸ್ವಲ್ಪ ಯೋಚಿಸ ಬಾರದಿತ್ತೆ !

ಈಗ ಮೊಗ್ಗು ಸೂರ್ಯಕಾಂತಿಯ ಗತಿ ಏನು
ಅರಳುವ ಮೋಹ ಹೃದಯದಲ್ಲಿಯೇ ಉಳಿಯುವುದೋ ಏನೋ
ಇಷ್ಟು ಸ್ವಾರ್ಥಿ ಹೇಗೆ ಆದೆ ನೀನು
ಸ್ವಲ್ಪ ಧೈರ್ಯ ಇಟ್ಟುಕೊಳ್ಳ ಬಾರದಿತ್ತೆ !

ಕಡಲ ಮೋಹ ನಿನಗೇಕಾಯಿತು ಅಷ್ಟು
ಬಾನಲ್ಲೆ ಇದ್ದು ಮೆರೆಯುತ್ತಿದ್ದರೆ ಖುಷಿ ನಮಗಾಗುತ್ತಿತ್ತು ಎಷ್ಟು
ಇನ್ನು ಈ ವೇದನೆ ಮಾಜುವುದು ಹೇಗೆ ಯಾರಿಗೆ ಗೊತ್ತು
ಸ್ವಲ್ಪ ನಮ್ಮ ಮೇಲೆ ಬಾಂಧವ್ಯ ಇಟ್ಟುಕೊಳ್ಳ ಬಾರದಿತ್ತೆ!

ಪುನಃ ಉದಯವಾಗುವುದು ನಿನ್ನ ನಿಯಮ
ಪುನಃ ಉದಯವಾಗುವೆ ಎಂಬ ನಿರೀಕ್ಷೆ ನಮ್ಮ
ಕನಸಾಗಿ ಉಳಿಯಲಾರೆ ಎಂಬ ಆಶಯ ನಮ್ಮ
ಸ್ವಲ್ಪ ನಮ್ಮ ಈ ಆಸೆ ಈಡೇರಿಸುವೆಯೇ !
by ಹರೀಶ್ ಶೆಟ್ಟಿ, ಶಿರ್ವ

2 comments:

  1. 'ಪುನಃ ಉದಯವಾಗುವೆ ಎಂಬ ನಿರೀಕ್ಷೆ 'ಲ್ಲೇ ನಾವು ಕಾಡಿದ್ದೇವೆ. ಮುಳಗಿದ ಸೂರ್ಯನ ಪ್ರಭೆ ಇನ್ನೂ ನಮ್ಮೊಳಗೆ ಬೆಳಕ ತೋರುತ್ತಲೇ ಇದೆ. ಅತ್ಯುತ್ತಮ ನುಡಿ ನಮನ.

    ReplyDelete
  2. ನಮ್ಮ ಮೇಲೆ ಇದ್ದ ಈ ಕಿರಣ ಸದಾ ಬೆಳಗುತ್ತಾ ಇರಲಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...