Thursday, April 4, 2013

ನಾನೇ

ನಾನೇ ಅಲ್ಲವೆನ್ನುವೆ ನೀನು 
ಆದರೆ ನಾನೇ ತುಂಬಿದೆ ನಿನ್ನಲ್ಲಿ 
ಏಕೆ ಕತ್ತಲನ್ನು ತುಂಬುವೆ ಒಳಗೆ 
ಬೆಳಕು ಇರುವಾಗ ಹೊರಗೆ 
ಬರಬರದಲ್ಲಿದ್ದ ನಿನ್ನ ಜೀವ 
ಜರಜರವಾಗಲಿದೆ ಒಂದು ದಿನ 
ಖಾರ ನುಡಿಯದಿರು 
ಜೇನೇ ಬೇಕೆಂದೆನಿಲ್ಲ
ಸಿಹಿ ಮಾತು ನುಡಿಯಲು 
ಅಳಕು ಯಾಕೆ ನಿನಗೆ ನಿನ್ನ ಮೇಲೆ 
ವಿಶ್ವಾಸ ಇರಲಿ ನಿನ್ನಲ್ಲಿ
ಕಾಲ ಕೆಟ್ಟರೆ ಏನಾಯಿತು
ನೀ ಕೆಡದಿರು
ಎಲ್ಲೇ ಇರು
ಮನುಷ್ಯನಾಗಿರು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...